ವೀಡಿಯೊ ಚಿತ್ರೀಕರಿಸಿದ ಆಪ್ ಸಂಸದ
ಬಿಜೆಪಿ ಕೋಲಾಹಲ: ರಾಜ್ಯಸಭೆ ಮುಂದೂಡಿಕೆ
ಹೊಸದಿಲ್ಲಿ, ಜು.22: ಸಂಸತ್ ಸಂಕೀರ್ಣದ ವೀಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವ ಮೂಲಕ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿರುವ ಎಎಪಿಯ ಲೋಕಸಭಾ ಸದಸ್ಯ ಭಗ್ವಂತ್ ಮಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಳುವ ಬಿಜೆಪಿ ಸದಸ್ಯರಿಂದು ರಾಜ್ಯಸಭೆಯನ್ನು ಮಧ್ಯಾಹ್ನದ ವರೆಗೆ ಬಲವಂತವಾಗಿ ಮುಂದೂಡಿಸಿದ್ದಾರೆ.
ಈ ವಿಷಯವು ತೀರಾ ಗಂಭೀರವಾದುದೆಂದು ಒಪ್ಪಿಕೊಂಡ ಉಪಸಭಾಪತಿ ಪಿ.ಜೆ. ಕುರಿಯನ್, ಸರಕಾರವು ಭದ್ರತಾ ಉಲ್ಲಂಘನೆಯನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ಸದಸ್ಯರು ಈ ವಿಷಯದಲ್ಲಿ ಚರ್ಚೆಯನ್ನು ಬಯಸಿದಲ್ಲಿ, ಸೂಕ್ತ ನಿರ್ಣಯವೊಂದನ್ನು ಕೈಗೊಳ್ಳಬೇಕಾಗುತ್ತದೆಂದು ಅವರು ತಿಳಿಸಿದರು.
ಮಾನ್‌ರನ್ನು ಟೀಕಿಸಿದ ಕಾಂಗ್ರೆಸ್ ಹಾಗೂ ಸಿಪಿಎಂ, ಇಂತಹ ಗಂಭೀರ ಭದ್ರತಾ ಉಲ್ಲಂಘನೆಗೆ ಸರಕಾರ ಯಾವ ಕ್ರಮ ಕೈಗೊಂಡಿದೆ? ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಬಹುಮತ ಪಡೆದಿರುವ ಲೋಕಸಭೆಯಲ್ಲಿಯೇ ಒತ್ತಾಯಿಸಲು ಅದಕ್ಕೆ ತೊಂದರೆಯೇನು ಬಂದಿತ್ತೆಂದು ತಿಳಿಯಬಯಸಿದವು.
Next Story





