ಬಬ್ಬುಕಟ್ಟೆ: ಹಿರಾ ಕಾಲೇಜಿನಲ್ಲಿನಾಯಕತ್ವ ಕಾರ್ಯಾಗಾರ
ಮಂಗಳೂರು, ಜು.22: ಬಬ್ಬುಕಟ್ಟೆ ಹಿರಾ ವಿಮೆನ್ಸ್ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರಿಗಾಗಿ ನಾಯಕತ್ವ ತರಬೇತಿ ಕಾರ್ಯಾಗಾರ ಹಿರಾ ಸಭಾಂಗಣದಲ್ಲಿ ಜರಗಿತು. ಕುವೈತ್‌ನ ಇಗ್ನೋ ಸೆಂಟರ್‌ನ ಉಪನ್ಯಾಸಕ ಬಿ.ಎಸ್.ಶರ್ುದ್ದೀನ್ ತರಬೇತಿ ನೀಡಿದರು. ವಿದ್ಯಾರ್ಥಿನಿ ಪಾರಿಶಾ ಕಿರಾಅತ್ ಪಠಿಸಿದರು. ಆಸಿಯಾ ಮೊಹ್ಸಿನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಹಾಗೂ ಶಾಂತಿ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್, ಸಂಚಾಲಕ ರಹ್ಮತುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
Next Story





