ತೆಂಕಮಿಜಾರು: ಭಿನ್ನ ಸಾಮರ್ಥ್ಯರೊಂದಿಗೆ ಆತ್ಮೀಯ ಕೂಟ
ಬಾಪೂಜಿ ಸೇವಾ ಕೇಂದ್ರ ಉದ್ಘಾಟನೆ

ಮೂಡುಬಿದಿರೆ, ಜು.22: ಭಿನ್ನ ಸಾಮರ್ಥ್ಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಅವರ ಜೀವನೋತ್ಸವವನ್ನು ಹೆಚ್ಚಿಸಿ ಮುಖ್ಯವಾಹಿನಿಯತ್ತ ಸೆಳೆಯುವಂತಹ ಕಾರ್ಯಕ್ರಮ ಗಳು ಹೆಚ್ಚು ಆಗಬೇಕಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಹೇಳಿದರು.
ತೆಂಕಮಿಜಾರು ಗ್ರಾಪಂ ನೇತೃತ್ವದಲ್ಲಿ ತೋಡಾರಿನ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಭಿನ್ನ ಸಾಮರ್ಥ್ಯರೊಂದಿಗೆ ಒಂದು ಆತ್ಮೀಯ ಕೂಟ ಹಾಗೂ ಪಂಚಾಯತ್-100-ಬಾಪೂಜಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.್ರಾಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಶೆಟ್ಟಿ ಮರಿಯಡ್ಕ, ಜಿಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸನ್ಮಾನ: ಮುಖವಾಡ ತಯಾರಿಸುವ ಮೂಲಕ ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿರುವ ಬಾಬು ಪರವ, ಮೋಹಿನಿ ಅಪ್ಪಾಜಿ ನಾಯ್ಕಾ ಸ್ಮಾರಕ ಆಳ್ವಾಸ್ ವಿಶೇಷ ಶಾಲೆಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾರನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಜೈನ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಬಲ್ಲಾಳ್ ಜೀವನೋತ್ಸಾಹದ ಮಾತುಗಳು, ಪತ್ರಕರ್ತ ಕಿರಣ್ ಮಂಜನಬೈಲು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಿಡಿಒ ಸಾಯೀಶ ಚೌಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಕೇಶ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





