ಜು.27ರಂದು ಹಜ್, ಉಮ್ರಾ ತರಬೇತಿ
ಮಂಗಳೂರು, ಜು. 22: ನಗರದ ಬಂದರ್ನ ಅನ್ಸಾರಿ ರಸ್ತೆಯಲ್ಲಿರುವ ಝೀನತ್ ಬಕ್ಷ್ ಯತೀಂಖಾನಾದ ವತಿಯಿಂದ ಹಜ್ ಯಾತ್ರಿಕರಿಗೆ ಹಜ್ ಮತ್ತು ಉಮ್ರಾ ತರಬೇತಿ ಶಿಬಿರವು ಜು.27ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಯತೀಂ ಖಾನಾ ಸಭಾಂಗಣದಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಎಸ್.ಪಿ.ಹಂಝ ಬಂಟ್ವಾಳ ಸಖಾಫಿ ಬ್ಯಾರಿ ಭಾಷೆಯಲ್ಲಿ ಹಾಗೂ ಹಝ್ರತ್ ಡಾ.ಮುಹಮ್ಮದ್ ಾಝಿಲ್ ರಝ್ವಿ ಕಾವಲ್ಕಟ್ಟೆ ಉರ್ದು ಭಾಷೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story