Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ‘ಮನೆ ಬೆಳಕು ಯೋಜನೆ’ ಅನುಷ್ಠಾನ

ಉಡುಪಿ ‘ಮನೆ ಬೆಳಕು ಯೋಜನೆ’ ಅನುಷ್ಠಾನ

ಬಡ ವಿದ್ಯಾರ್ಥಿಗಳ ಮನೆಗೆ ಸೌರ ವಿದ್ಯುತ್ ಸೌಲಭ್ಯ

ವಾರ್ತಾಭಾರತಿವಾರ್ತಾಭಾರತಿ23 July 2016 12:26 AM IST
share
ಉಡುಪಿ ‘ಮನೆ ಬೆಳಕು ಯೋಜನೆ’ ಅನುಷ್ಠಾನ

ಉಡುಪಿ, ಜು.22: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕರ್ಣಾಟಕ ಬ್ಯಾಂಕ್ ಮತ್ತು ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಬಡ ವಿದ್ಯಾರ್ಥಿಗಳಿಗೆ ಮನೆ ಬೆಳಕು ಯೋಜನೆ ಅನುಷ್ಠಾನ ಕಾರ್ಯಕ್ರಮ ಸಗ್ರಿಯಲ್ಲಿರುವ ಬಾದಾಮಿಯ ವಾಲೇಕರ್ ಸಹೋದರರ ಮನೆಯಲ್ಲಿ ಜರಗಿತು.
 ವಿದ್ಯಾರ್ಥಿಗಳಿರುವ, ವಿದ್ಯುತ್ ಇಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವ ‘ಮನೆ ಬೆಳಕು ಯೋಜನೆ’ಯ ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ 100ಮನೆಗಳಿಗೆ ಸೌರ ವಿದ್ಯುತ್ ಅಳವಡಿಸಲಾಗಿದ್ದು, ಇದನ್ನು ಸಗ್ರಿಯಲ್ಲಿರುವ ವಲಸೆ ಕಾರ್ಮಿಕ ಲೆಂಕ್ಯಾಪ್ಪ ವಾಲೇಕಾರ್ ಹಾಗೂ ಶ್ರೀಕಾಂತ್ ವಾಲೇಕಾರ್ ಮನೆಯಲ್ಲಿ ಕರ್ಣಾಟಕ ಬ್ಯಾಂಕ್‌ನ ಮುಖ್ಯಮಹಾಪ್ರಬಂಧಕ ಎಂ.ಮಹಾ ಬಲೇಶ್ವರ ಭಟ್ ಅನುಷ್ಠಾನಗೊಳಿಸಿದರು.
ಕಳೆದ ನವೆಂಬರ್‌ನಲ್ಲಿ ಜಾರಿಯಾದ ಈ ಯೋಜನೆಗೆ ಕರ್ಣಾಟಕ ಬ್ಯಾಂಕ್ ಪ್ರತೀ ಮನೆಗೆ 5 ಸಾವಿರ ರೂ. ನಂತೆ 100 ಮನೆಗಳಿಗೆ 5 ಲಕ್ಷ ರೂ. ಮತ್ತು ಭಾರತೀಯ ವಿಕಾಸ ಟ್ರಸ್ಟ್ ತಲಾ 500 ರೂ. ಸಹಾಯಧನ ಒದಗಿಸಿದೆ. ಈ ಯೋಜನೆ ದುರುಪಯೋಗವಾಗದಂತೆ ಪ್ರತೀ ಫಲಾನುಭವಿಗಳಿಂದ 4,000 ರೂ. ಪಡೆದುಕೊಳ್ಳಲಾಗಿದೆ. 9,500 ರೂ. ಮೊತ್ತದ ಈ ಯೋಜನೆಯಲ್ಲಿ ಒಂದು ಮನೆಗೆ 2 ಲೈಟ್, ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿ ಒದಗಿಸಲಾಗುತ್ತದೆ.
ಲೆಂಕ್ಯಾಪ್ಪ ವಾಲೇಕರ್ ಕಳೆದ 21 ವರ್ಷಗಳಿಂದ ಸಗ್ರಿಯಲ್ಲಿ ವಾಸವಾಗಿದ್ದು, ಕತ್ತಲಲ್ಲಿ ತಮ್ಮ ಬದುಕು ನಡೆಸುತ್ತಿದ್ದರು. ಕೂಲಿ ಕಾರ್ಮಿಕರಾಗಿರುವ ಲೆಂಕ್ಯಾಪ್ಪ ಹಾಗೂ ಶಾಂತಾ ದಂಪತಿಗೆ 5ನೆ ತರಗತಿ ಕಲಿಯುವ ಗಣೇಶ್ ಹಾಗೂ 2ನೆ ತರಗತಿಯ ಕಮಲಾಕ್ಷಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅದೇ ರೀತಿ ಶ್ರೀಕಾಂತ್ ವಾಲೇಕರ್ ಹಾಗೂ ರೇಣುಕಾ ದಂಪತಿಗೆ 2 ನೆ ತರಗತಿ ಕಲಿಯುವ ಪ್ರವೀಣ್ ಎಂಬ ಮಗನಿದ್ದಾನೆ. ಈ ಮಕ್ಕಳು ಸಗ್ರಿ ನೋಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಲೈಟ್‌ನ ಉಪ ಮಹಾಪ್ರಬಂಧಕ ಜಗದೀಶ್ ಪೈ, ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ, ಫಲಾನುಭವಿಗಳ ಹೆಸರನ್ನು ಈ ಯೋಜನೆಗೆ ಸೂಚಿಸಿದ ಸಗ್ರಿಯ ಕೃಷ್ಣ ಹೆಬ್ಬಾರ್ ಹಾಗೂ ಜ್ಯೋತಿ ಹೆಬ್ಬಾರ್ ಉಪಸ್ಥಿತರಿದ್ದರು.
ಟ್ರಸ್ಟ್‌ನ ಸಲಹೆಗಾರ ಅನಂತರ ಪ್ರಭು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ ವಂದಿಸಿದರು. ಪಿ.ಕೃಷ್ಣಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
‘ವಿದ್ಯುತ್ ಇಲ್ಲದಾಗ ಕತ್ತಲಾಗುವ ಮೊದಲೇ ಓದು ಮುಗಿಸಿ ಮಲಗುತ್ತಿದ್ದೆ. ಈಗ ರಾತ್ರಿ 9 ಗಂಟೆಯವರೆಗೂ ಓದುತ್ತಿದ್ದೇನೆ. ಮುಂದೆ ಓದಿ ಇಂಜಿನಿಯರ್ ಆಗಬೇಕೆಂಬುದು ನನ್ನ ಆಸೆ’
-ಗಣೇಶ್, ವಿದ್ಯಾರ್ಥಿ

‘ಮೊದಲು ಕತ್ತಲಲ್ಲಿಯೇ ಬದುಕು ನಡೆಸುತ್ತಿದ್ದ ನಮಗೆ ಈ ಯೋಜನೆಯಿಂದ ಕಳೆದ 5 ತಿಂಗಳುಗಳಿಂದ ಬೆಳಕು ಬಂದಿದೆ. ಶಾಲೆಗೆ ಹೋಗುವ ಮನೆಯ ಮಕ್ಕಳಿಗೆ ಇದರಿಂದ ತುಂಬಾ ಅನುಕೂಲವಾಗಿದೆ’
-ಲೆಂಕ್ಯಾಪ್ಪ ವಾಲೇಕರ್, ಸಗ್ರಿ ನಿವಾಸಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X