ಮೊದಲ ಟೆಸ್ಟ್: ವಿಂಡೀಸ್ ಮೇಲೆ ಟೀಮ್ ಇಂಡಿಯಾ ಸವಾರಿ
ಭಾರತ ಮೊದಲ ಇನಿಂಗ್ಸ್ 566/8; ವಿಂಡೀಸ್ 31/1

ಆಂಟಿಗುವಾ, ಜು.23: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ಗೆ ಕಠಿಣ ಸವಾಲನ್ನು ಸೇರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಎರಡನೆ ದಿನದಾಟದಂತ್ಯಕ್ಕೆ ವೆಸ್ಟ್ ಇಂಡೀಸ್ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 31 ರನ್ ಗಳಿಸಿದೆ.
ವಿಂಡೀಸ್ ನ ಆರಂಭಿಕ ದಾಂಡಿಗ ಚಂದ್ರಿಕಾ (16) ಅವರಿಗೆ ವೇಗಿ ಮುಹಮ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಕೆ.ಸಿ.ಬ್ರಾಥ್ ವೈಟ್ ಔಟಾಗದೆ 11 ರನ್ ಮತ್ತು ನೈಟ್ ವಾಚ್ಮನ್ ಡಿ ಬಿಶೂ ಖಾತೆ ತೆರೆಯದೆ ಬ್ಯಾಟಿಂಗ್ ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್ ನಲ್ಲಿ ಭಾರತ 161.5 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 566 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಮಿತ್ ಮಿಶ್ರಾ ಔಟಾಗದೆ 53 ರನ್ ಮತ್ತು ಮುಹಮ್ಮದ್ ಶಮಿ ಔಟಾಗದೆ 17 ರನ್ ಗಳಿಸಿದ್ದಾಗ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ 161.5 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 566( ಕೊಹ್ಲಿ 200, ಅಶ್ವಿನ್ 113, ಧವನ್ 84, ಮಿಶ್ರಾ ಔಟಾಗದೆ 53, ಸಹಾ 40, ರಹಾನೆ 22, ಶಮಿ ಔಟಾಗದೆ 17, ಪೂಜಾರ 16, ವಿಜಯ್ 7, ಇತರೆ 14; ಕೆ.ಸಿ ಬ್ರಾಥ್ ವೈಟ್ 65ಕ್ಕೆ 3, ಬಿಶೂ 163ಕ್ಕೆ 3, ಗ್ಯಾಬ್ರಿಯೆಲ್ 65ಕ್ಕೆ 2).
ವಿಂಡೀಸ್ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 31( ಚಂದ್ರಿಕಾ 16, ಕೆ.ಸಿ.ಬ್ರಾಥ್ ವೈಟ್ ಔಟಾಗದೆ 11; ಶಮಿ 6ಕ್ಕೆ 1).







