ಮರ್ಧಾಳ: ಮನೆಯಿಂದ ಯುವತಿ ನಾಪತ್ತೆ; ದೂರು

ಕಡಬ, ಜು.23: ಇಲ್ಲಿನ 102 ನೆಕ್ಕಿಲಾಡಿ ಗ್ರಾಮದ ನಿಂತಿಕಲ್ಲು ನಿವಾಸಿ ಗಿರಿಜಾ ಎಂಬವರ ಪುತ್ರಿ ಪುಷ್ಪಾ(18) ಎಂಬಾಕೆ ಗುರುವಾರ ಸಾಯಂಕಾಲ ಮರ್ಧಾಳದಿಂದ ಸಾಮಗ್ರಿ ಖರೀದಿಸಲು ಮನೆಯಿಂದ ಹೊರಟವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಮನೆಮಂದಿ ಸಂಬಂಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಯುವತಿಯ ತಾಯಿ ಗಿರಿಜಾ ಕಡಬ ಠಾಣೆಗೆ ದೂರು ನೀಡಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





