ಯುನಿವೆಫ್‌ನಿಂದ ಹಜ್ ತರಬೇತಿ ಶಿಬಿರ

ಮಂಗಳೂರು, ಜು.23: ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರ ಕಂಕನಾಡಿಯ ಜಮೀಯತುಲ್ ಲಾಹ್ ಹಾಲ್‌ನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ಹಜ್ ಕರ್ಮದ ಕುರಿತು ಹಾಜಿಗಳು ಭಯಪಡಬೇಕಾದ ಅಗತ್ಯವಿಲ್ಲ. ಹೆಚ್ಚುತ್ತಿರುವ ಹಾಜಿಗಳ ಸಂಖ್ಯೆಗೆ ಅನುಸಾರವಾಗಿ ಸೌದಿ ಸರಕಾರ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿದೆ. ಶಾಂತ ಮನಸ್ಸಿನಿಂದ ಹಜ್ ಕರ್ಮಗಳನ್ನು ನಿರ್ವಹಿಸುವಂತೆ ಸಲಹೆ ನೀಡಿದರು. ಕರ್ನಾಟಕ ವಕ್ಫ್ ಬೋರ್ಡ್‌ನ ಅಧೀನದಲ್ಲಿರುವ ಮಸೀದಿಗಳಿಗೆ ಮಾಸಿಕ ಸಹಾಯಧನದ ಕುರಿತೂ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹಜ್ ಹಾಗೂ ಉಮ್ರಾದ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು. ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಜ್ ಕರ್ಮದಲ್ಲಿ ಇರುವ ಕೆಲವು ಸಮಸ್ಯೆಗಳಿಗೆ ವಿದ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಪರಿಹಾರವನ್ನು ಸೂಚಿಸಲಾಯಿತು.
Next Story





