ಕಿರುಕುಳಕ್ಕೆ ಬಲಿಯಾದ ಬಿಎಸ್ಸಿ ವಿದ್ಯಾರ್ಥಿನಿ

ಕೊಝಿಕ್ಕೋಡ್,ಜು.23 :ಹಿರಿಯ ವಿದ್ಯಾರ್ಥಿನಿಯರ ಕಿರುಕುಳದಿಂದ ಬೇಸತ್ತ 18 ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ವಟಕರ ಪಟ್ಟಣದಿಂದ ವರದಿಯಗಿದೆ.
ಮೃತ ಯುವತಿಯನ್ನು ಆಸ್ನಾಸ್ ಎಂದು ಗುರುತಿಸಲಾಗಿದೆ. ಆಕೆ ಶುಕ್ರವಾರ ತನ್ನ ಮನೆಯ ಬಚ್ಚಲುಕೋಣೆಯಲ್ಲಿ ನೇಣುಬಿಗಿದು ಸಾವನ್ನಪ್ಪಿರುವುದು ಕಂಡು ಬಂತು.
ಆಸ್ನಾಸ್ಚೆರಂಡತ್ತೂರಿನ ಎಂ ಎಚ್ ಇ ಎಸ್ ಕಾಲೇಜಿನ ಎರಡನೇ ವರ್ಷದ ಮೈಕ್ರೋಬಯಲಾಜಿ ವಿದ್ಯಾರ್ಥಿನಿಯಾಗಿದ್ದಳು. ಹಿರಿಯ ವಿದ್ಯಾರ್ಥಿನಿಯರ ಕಿರುಕುಳದ ಬಗ್ಗೆ ಆಕೆ ಕಾಲೇಜು ಆಡಳಿತಕ್ಕೆ ಹಲವಾರು ಬಾರಿ ದೂರು ನೀಡಿದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಆಕೆ ಬೇಸತ್ತು ಸಾಯುವ ನಿರ್ಧಾರ ಕೈಗೊಂಡಳೆಂದು ಹೇಳಲಾಗಿದೆ. ಆತ್ಮಹತ್ಯೆಗೈಯ್ಯುವ ಮುನ್ನಾ ದಿನ ಕೂಡ ಆಕೆ ಕಿರುಕುಳಕ್ಕೊಳಗಾಗಿದ್ದಳು. ಯುವತಿ ಯಾವುದೇ ಡೆತ್ ನೋಟನ್ನು ಬರೆದಿಲ್ಲವೆಂದು ಪೊಲೀಸರು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ.
Next Story





