ಗಿಡ ನೆಡುವ ಕಾರ್ಯಕ್ರಮದಲ್ಲಿ ಕೈಜೋಡಿಸಲು ಖಾದರ್ ಕರೆ

ಉಳ್ಳಾಲ, ಜು.23: ಉಳ್ಳಾಲದಲ್ಲಿ ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳ ಇತರ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇಂತಹ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದರೆ ಮುಂದಿನ 10 ವರ್ಷಗಳಲ್ಲಿ ಉಳ್ಳಾಲದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದು ಆಹಾರ ಮತುತಿ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಜಂಟಿ ಆಶ್ರಯದಲ್ಲಿ ದ.ಕ.ಜಿಲ್ಲಾ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅವರು ಇಂದು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ವಠಾರದಲ್ಲಿ ನಿಸರ್ಗದತ್ತ ನಮ್ಮ ನಡೆ ವನಮಹೋತ್ಸವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಳ್ಳಾಲ ಧಾರ್ಮಿಕ ಕೇಂದ್ರದ ನೇತೃತ್ವದಲ್ಲಿ ಗಿಡ ಬೆಳೆಸುವ ಮೂಲಕ ವಿದ್ಯಾರ್ಥಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಉಳ್ಳಾಲ ಮಾತನಾಡಿ, ದರ್ಗಾ ಸಮಿತಿಯರ ಹಾಗೂ ದರ್ಗಾಕ್ಕೆ ಒಳಪಡುವ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಗಿದೆ. ಸಸಿಗಳನ್ನು ಬೆಳೆಸಿ ಪೋಷಿಸುವ ಕಾರ್ಯದಲ್ಲೂ ಎಲ್ಲರೂ ತೊಡಗಿಕೊಳ್ಳಬೇಕು. ಈ ಹಿಂದೆಯೂ ಉಳ್ಳಾಲದಲ್ಲಿ ಶೇ. 50ರಷ್ಟು ಸಸಿ ನೆಟ್ಟು ಕಾಡು ಮಾಡುವ ಪ್ರಯತ್ನ ನಡೆದಿತ್ತು. ಆದರೆ ಕಡಲ್ಕೊರೆತದಿಂದಾಗಿ ಬೆಳೆದಿದ್ದ ಮರಗಳು ನಾಶವಾಗಿವೆ ಎಂದರು.
ವಲಯ ಅರಣ್ಯಾಧಿಕಾರಿ ಶ್ರೀಧರ್ ಮಾತನಾಡಿ, ಸಸಿ ನೆಡುವ ಕಾರ್ಯವನ್ನು ವಿದ್ಯಾರ್ಥಿಗಳು, ಜನರು ನಡೆಸಬೇಕು. ಇದರಿಂದಾಗಿ ಮುಂದಿನ ಜೀವನದಲ್ಲಿ ಬೇಕಾದ ಸ್ವಚ್ಛ ಗಾಳಿ ಸೇರಿದಂತೆ ಸ್ವಚ್ಛ ವಾತಾವರಣ ಸೃಷ್ಟಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಞಿಮೋನು, ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್ ಹಳೆಕೋಟೆ, ಜೊತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ ಇಲ್ಯಾಸ್ ತೋಟ, ಮಾಸ್ತಿಕಟ್ಟೆ ಮಸೀದಿ ಅಧ್ಯಕ್ಷ ಬಾವ ಅಹ್ಮದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎ.ಎ.ಖಾದರ್, ಮುತ್ತಿಶ್ ಸುಲೈಮಾನ್ ಸಖಾಫಿ, ಹಳೆಕೋಟೆ ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದ್ ಹಳೆಕೋಟೆ, ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ, ಪಂಪ್‌ವೆಲ್ ಮಸೀದಿ ಖತೀಬ್ ಅಬ್ದುಲ್ ರಹ್ಮಾನ್, ಸೈಯದ್ ಮದನಿ ಟ್ರಸ್ಟ್‌ನ ಶೈಕ್ಷಣಿಕ ಸಂಸ್ಥೆಗಳ ಮೇಲ್ವಿಚಾರಕ ಆಬ್ದುಲ್ಲತ್ೀ, ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಮೊಯ್ದಿನ್, ಸದಸ್ಯರಾದ ರೂಕ್ ಚೆಂಬುಗುಡ್ಡೆ, ಎ.ಕೆ. ಮೊಯ್ದಿನ್, ಮೊಯ್ದಿನಬ್ಬ ಬೊಟ್ಟು, ಅಬೂಬಕರ್ ಕೋಟೆಪುರ, ಅಬ್ದುಲ್ಲ ಮೇಲಂಗಡಿ, ಹಮೀದ್ ಕೋಡಿ, ಅಬ್ದುಲ್ ರಹ್ಮಾನ್ ಕೋಟೆಪುರ, ಮೊಯ್ದಿನಬ್ಬ ಆಝಾದ್ ನಗರ, ಕೆ.ಎನ್.ಮುಹಮ್ಮದ್ ಉಪಸ್ಥಿತರಿದ್ದರು.
ಮಾಧವ ಉಳ್ಳಾಲ್ ಮತ್ತು ಕೃಷ್ಣಪ್ಪ ಸಸಿಗಳನ್ನು ನೆಡಲು ಮಾರ್ಗದರ್ಶನ ನೀಡಿದರು. ಸೋಮವಾರದಿಂದ ಒಂದು ವಾರಗಳ ಕಾಲ ದರ್ಗಾ ಒಳಪಟ್ಟ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು 5,000ಕ್ಕೂ ಹೆಚ್ಚು ಗಿಡಗಳನ್ನು ನೆಡಲಿದ್ದಾರೆ. ಉಳ್ಳಾಲ ದರ್ಗಾ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾ ವಕ್ತಾರ ಾರೂಕ್ ಉಳ್ಳಾಲ್ ಸ್ವಾಗತಿಸಿದರು. ಸೈಯದ್ ಮದನಿ ಹಳೆಕೋಟೆ ಇಲ್ಲಿನ ಮುಖ್ಯಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರ್ವಹಿಸಿದರು. ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ವಂದಿಸಿದರು.







