Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ತವರೂರಿನಲ್ಲಿ ದಲಿತರ ಪ್ರತಿಭಟನೆ

ಮೋದಿ ತವರೂರಿನಲ್ಲಿ ದಲಿತರ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ23 July 2016 11:50 PM IST
share

ವಡ್ನಗರ್,ಜು.23: ಉನಾದಲ್ಲಿ ಸತ್ತ ದನ ವೊಂದರ ಚರ್ಮವನ್ನು ಸುಲಿದುದಕ್ಕಾಗಿ ದಲಿತ ಯುವಕರ ಮೇಲೆ ಗೋರಕ್ಷಕರ ಅಮಾನವೀಯ ದಾಳಿಯನ್ನು ವಿರೋಧಿಸಿ ಗುಜರಾತ್‌ನಾದ್ಯಂತ ನಡೆಯುತ್ತಿರುವ ತೀವ್ರ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಯವರ ತವರೂರು ವಡ್ನಗರ್ ಶುಕ್ರವಾರ ಸಾಕ್ಷಿಯಾಗಿದೆ. ದಲಿತರ ಮೇಲಿನ ದಾಳಿಗೆ ಪ್ರಧಾನಿ ಮತ್ತು ಬಿಜೆಪಿ ಹೊಣೆಗಾರರೆಂದು ಆರೋಪಿಸಿ 4,000ಕ್ಕೂ ಅಧಿಕ ದಲಿತರು ಭಾರೀ ಪ್ರದರ್ಶನ ನಡೆಸಿದ್ದಾರೆ.
ಹಲವಾರು ದಲಿತರು ಹಿಂದೂಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶವ ಮೆರ ವಣಿಗೆಯ ವೇಳೆ ಮಹಿಳೆಯರು ಬಳಸುವ ಸಾಂಪ್ರದಾಯಿಕ ಘೋಷಣೆಯನ್ನು ಪರಿಷ್ಕರಿಸಿ ‘ಹಾಯ್ ರೇ ಮೋದಿ...ಹಾಯ್-ಹಾಯ್ ರೇ ಮೋದಿ ’ ಎಂದು ಬೊಬ್ಬೆಯಿಡುತ್ತಿದ್ದ ದೃಶ್ಯಗಳು ಪ್ರತಿಭಟನೆಯ ವಿಡಿಯೊದಲ್ಲಿ ಕಂಡುಬಂದಿವೆ.
ಉದ್ದೇಶಪೂರ್ವಕವಾಗಿಯೇ ತಾವು ಹಾಯ್-ಹಾಯ್ ಘೋಷಣೆಯನ್ನು ಕೂಗಿದ್ದೇವೆ. ಇದು ಬಿಜೆಪಿ ಮತ್ತು ಸಂಘ ಪರಿ ವಾರಕ್ಕೆ ಎಚ್ಚರಿಕೆಯಾಗಿದೆ ಎಂದು ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ದಲಿತ ಸಮುದಾಯದ ನಾಯಕ ಶೈಲೇಶಭಾಯಿ ಶಂಕರಭಾಯಿ ಎಂಬವರು ಹೇಳಿದರು.
 ದಾಳಿಕೋರರ ಹಿಂದುತ್ವ ಸಿದ್ಧಾಂತವನ್ನು ಬಿಜೆಪಿ ಮತ್ತು ಮೋದಿ ಹಂಚಿಕೊಂಡಿ ದ್ದಾರೆ. ಈ ಸಿದ್ಧಾಂತವು ಗುಜರಾತನ್ನು ಹಾಳು ಗೆಡವಿದೆ. ಮುಸ್ಲಿಮರ ನೈತಿಕ ಸ್ಥೈರ್ಯ ವನ್ನಂತೂ ಅವರು ಉಡುಗಿಸಿಬಿಟ್ಟಿದ್ದಾರೆ. ಇದೀಗ ಅವರು ದಲಿತರ ಬೆನ್ನು ಬಿದ್ದಿದ್ದಾರೆ ಎಂದು ಅವರು ಕಿಡಿಗಾರಿದರು.
ಮೆಹ್ಸಾನಾ ಜಿಲ್ಲೆಯ,ಮೋದಿ ಪರ ನಿಷ್ಠೆಗಾಗಿ ಹೆಸರಾಗಿರುವ ವಡ್ನಗರದಲ್ಲಿ ಇದು ಇಂತಹ ಮೊದಲ ಪ್ರತಿಭಟನೆಯಾಗಿದ್ದು, ಜು.11ರ ಉನಾ ಘಟನೆಯ ವಿರುದ್ಧ ದಲಿತ ಸಮುದಾಯದಲ್ಲಿ ಕ್ರೋಧವು ಹೆಪ್ಪುಗಟ್ಟಿರುವ ಸಂದರ್ಭದಲ್ಲಿ ನಡೆದಿದೆ.
ತನ್ಮಧ್ಯೆ, ಸ್ವಘೋಷಿತ ಗೋರಕ್ಷಕರ ನಿರಂಕುಶತೆ ಮತ್ತು ಸರಕಾರದ ನಿರ್ಲಕ್ಷವನ್ನು ವಿರೋಧಿಸಿ ಗುಜರಾತ್‌ನಾದ್ಯಂತ ಸಾವಿರಾರು ದಲಿತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
 ಗಣ್ಯ ರಾಜಕಾರಣಿಗಳ ನಿವಾಸಗಳು ಮತ್ತು ಸರಕಾರಿ ಕಚೇರಿಗಳ ಹೊರಗೆ ನೂರಾರು ದನಗಳ ಕಳೇಬರಗಳನ್ನು ರಾಶಿ ಹಾಕಿರುವ ದಲಿತರು, ಸರಕಾರವು ತಮಗೆ ರಕ್ಷಣೆ ನೀಡುವವರೆಗೆ ಅವುಗಳನ್ನು ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾ ಗಳನ್ನು ಉತ್ತೇಜಿಸುತ್ತಿರುವುದಕ್ಕಾಗಿ ಮುಖ್ಯ ಮಂತ್ರಿ ಆನಂದಿಬೆನ್ ಪಟೇಲ್ ಮತ್ತು ಬಿಜೆಪಿ ವಿರುದ್ಧವೂ ಪ್ರತಿಭಟನಾ ಕಾರರು ಘೋಷಣೆಗಳನ್ನು ಕೂಗಿದ್ದಾರೆ.
    ದನಗಳಕಳೇಬರಗಳನ್ನು ಇನ್ನೆಂದೂ ಮುಟ್ಟುವುದಿಲ್ಲವೆಂದು ಹಲವಾರು ಪ್ರತಿಭಟನಾಕಾರರು ಪ್ರತಿಜ್ಞೆ ಮಾಡಿದ್ದಾರೆ. ದಲಿತರ ಮೇಲಿನ ದಾಳಿಗಳು ನಿಲ್ಲದಿದ್ದರೆ ಹಿಂದೂ ಧರ್ಮವನ್ನು ತೊರೆಯುವೆವೆಂದು ಅವರು ಬೆದರಿಕೆಯನ್ನೊಡ್ಡಿದ್ದಾರೆ.
ಸತ್ತ ದನಗಳನ್ನು ಪಡೆದುಕೊಂಡು ಅವುಗಳ ಚರ್ಮ ಸುಲಿದು ಅವಶೇಷಗಳನ್ನು ವಿಲೇವಾರಿ ಮಾಡುವುದನ್ನು ತಾವು ನಿಲ್ಲಿಸಿದರೆ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ಹೊಂದಿರುವ ಮೇಲ್ಜಾ ತಿಗಳು ತಮ್ಮ್ಮ ಮುಂದೆ ಮಂಡಿಯೂರಲಿವೆ. ಮೇಲ್ಜಾತಿಗಳ ಜನರೇ ಮಾಲಕರಾಗಿರುವ ಚರ್ಮೋತ್ಪನ್ನಗಳ ಕಾರ್ಖಾನೆಗಳಿಗೂ ಇದರ ಬಿಸಿ ತಟ್ಟಲಿದೆ ಎಂದು ಪ್ರತಿಭಟನೆಯ ಸಂಘಟಕರಲ್ಲೋರ್ವರಾದ ರಾಜೇಶ ಪರಮಾರ್ ಎಂಬವರು ಹೇಳಿದರು.
 ರಾಜ್ಯವ್ಯಾಪಿ ನಡೆಯುತ್ತಿರುವ ದಲಿತರ ಬೃಹತ್ ಪ್ರತಿಭಟನೆಯು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಶುಕ್ರವಾರದ ಪ್ರತಿಭಟನೆಯು ಮೋದಿಯವರ ವಿರುದ್ಧ ತವರೂರಿನಲ್ಲಿ ಇಂತಹ ಮೊದಲ ಪ್ರತಿಭಟನೆಯಾಗಿದ್ದು, ಹೆಚ್ಚಿನ ಪ್ರತಿಭಟನಾಕಾರರು ದಲಿತ ಸಮುದಾ ಯದವರಾಗಿರಲಿಲ್ಲ ಎಂದು ಬಿಜೆಪಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X