ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷೆಯಾಗಿ ಮೀನಾಕ್ಷಿ ಲೇಖಿ ನೇಮಕ
ಹೊಸದಿಲ್ಲಿ, ಜು.23: ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷೆಯಾಗಿ ಬಿಜೆಪಿ ನಾಯಕಿ ಹಾಗೂ ಹೊಸದಿಲ್ಲಿಯ ಸಂಸದೆ ಮೀನಾಕ್ಷಿ ಲೇಖಿ ನೇಮಕಗೊಂಡಿದ್ದಾರೆ. ಸಚಿವನಾಗಿ ಆಯ್ಕೆಯಾದ ಕಾರಣ ಎಸ್.ಎಸ್.ಅಹ್ಲುವಾಲಿಯ ಜು.18ರಂದು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಎಸ್.ಎಸ್.ಅಹ್ಲುವಾಲಿಯ ರಾಜೀನಾಮೆ ನೀಡಿರುವು ದರಿಂದ, ಸ್ಪೀಕರ್, ಸಮಿತಿಯ ಅಧ್ಯಕ್ಷೆಯನ್ನಾಗಿ ಮೀನಾಕ್ಷಿ ಲೇಖಿಯವರನ್ನು ನೇಮಿಸಿದ್ದಾರೆಂದು ಲೋಕಸಭೆಯ ವಾರ್ತಾಪತ್ರ ತಿಳಿಸಿದೆ.
ಸಚಿವನಾಗಿ ನೇಮಕಗೊಂಡಿರುವುದರಿಂದಾಗಿ ಅಹ್ಲುವಾಲಿಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಭೂ ಸ್ವಾಧೀನದಲ್ಲಿ ನ್ಯಾಯಬದ್ಧ ಪರಿಹಾರ ಹಾಗೂ ಪಾರದರ್ಶಕತೆಯ ಹಕ್ಕು, ಪುನರ್ವಸತಿ ಹಾಗೂ ಮರು ವಸಾಹತು (2ನೆ ತಿದ್ದುಪಡಿ) ಮಸೂದೆ-2015ರ ಕುರಿತಾದ ಜಂಟಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಉಳಿದ ಸ್ಥಾನವನ್ನು ಬಿಜೆಪಿಯ ಲೋಕಸಭಾ ಸದಸ್ಯ ಗಣೇಶ್ ಸಿಂಗ್ ತುಂಬಲಿದ್ದಾರೆ.
Next Story





