ಕಾರು ಢಿಕ್ಕಿ: ವ್ಯಕ್ತಿ ಮೃತ್ಯು
ಕಾಸರಗೋಡು, ಜು.23: ವೇಲಾಂಕಣ್ಣಿ ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ಕಾಸರಗೋಡು ನಿವಾಸಿ, ಪಯ್ಯನ್ನೂರು ನ್ಯಾಯಾಲಯದ ನಿವೃತ್ತ ನೌಕರ ಜೋಸ್ (55) ಎಂಬವರು ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಜೋಸ್ ಸೇರಿದಂತೆ ಐದು ಮಂದಿಯ ತಂಡ ಬಸ್ಸಿನಲ್ಲಿ ವೇಲಾಂಕಣ್ಣಿ ಗೆ ತೆರಳಿತ್ತು. ದಾರಿ ಮಧ್ಯೆ ಚಹಾ ಸೇವಿಸಲೆಂದು ಬಸ್ ನಿಲುಗಡೆಗೊಳಿಸಲಾಗಿತ್ತು. ಚಹಾ ಸೇವಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
Next Story





