ಮಂಗಳೂರು, ಜು.24: ಬೃಹತ್ ಮರವೊಂದು ಬುಡಸಹಿತ ರಸ್ತೆಗೆ ಉರುಳಿಬಿದ್ದ ಘಟನೆ ನಗರದ ಬೆಂದೂರ್ವೆಲ್ನ ಎಸ್ಸಿಎಸ್ ಆಸ್ಪತ್ರೆ ಬಳಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದೆ.
ಮರದ ಬುಡ ದುರ್ಬಲಗೊಂಡು ಮರ ಉರುಳಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮರವನ್ನು ಕತ್ತರಿಸಿ ತೆರವುಗೊಳಿಸಿದ್ದಾರೆ.