ಚಾರ್ಮಾಡಿ: ಕುಂಡ ಕೊರಗರ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ

ಬೆಳ್ತಂಗಡಿ, ಜು.24: ಚಾರ್ಮಾಡಿ ಗ್ರಾಮದಲ್ಲಿನ ಗಾಂಧೀನಗರ ನಿವಾಸಿ ಕುಂಡ ಕೊರಗರ ಮನೆ ನಿರ್ಮಾಣ ಕಾಮಗಾರಿಯ ಬಗ್ಗೆ ಜಿ.ಪಂ. ಸದಸ್ಯೆ ನಮಿತಾ ಪರಿಶೀಲನೆ ನಡೆಸಿದರು.
ಟರ್ಪಾಲ್ ಅಡಿಯಲ್ಲಿ ವಾಸಿಸುತ್ತಿದ್ದ ಕುಂಡ ಕೊರಗರ ಮನೆಯ ದುರವಸ್ಥೆಯ ಬಗ್ಗೆ ವಾರ್ತಾಭಾರತಿ.ಇನ್ ವರದಿ ಮಾಡಿತ್ತು. ವರದಿ ಗಮನಿಸಿದ್ದ ಜಿ.ಪಂ ಸದಸ್ಯರುಗಳು ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಮನೆ ನಿರ್ಮಾಣ ಮಾಡುವಂತೆ ಸೂಚಿಸಿದ್ದರು.
ಇದೀಗ ಐಟಿಡಿಪಿ ಇಲಾಖೆಯ ನೇತೃತ್ವದಲ್ಲಿ ಗ್ರಾಮ ಪಂಚಾಯತ್‌ನ ಸಹಕಾರದೊಂದಿಗೆ ಮನೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಪಂಚಾಂಗದ ಕಾಮಗಾರಿ ಪೂರ್ಣಗೊಂಡಿದೆ. ಕುಂಡ ಕೊರಗರು ಉತ್ಸಾಹದಿಂದ ಮನೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರೂ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಜಿ.ಪಂ. ಸದಸ್ಯರು ತಿಳಿಸಿದರು. ಯಾವುದೇ ಸಮಸ್ಯೆಗಳಿದ್ದರೆ ತಮಗೆ ಮಾಹಿತಿ ನೀಡುವಂತೆ ಜಿ.ಪಂ ಸದಸ್ಯರು ಸೂಚಿಸಿದರು.
ಈ ಸಂದರ್ಭ ಚಾರ್ಮಾಡಿ ಗ್ರಾ.ಪಂ. ಸದಸ್ಯರುಗಳಾದ ಶಾಜಿ, ಅಬ್ದುಲ್ ಖಾದರ್, ಅಬೂಬಕರ್, ಶೋಭಾ, ದೇವಕಿ, ಶಕೀನಾ, ಶೋಭಾ ಸಿಬಿ, ನೆರಿಯ ಗ್ರಾ.ಪಂ ಸದಸ್ಯ ಅಶ್ರಫ್, ಯಶೋಧರ ಚಾರ್ಮಾಡಿ, ಅಮಿತ್ ರಾಜ್, ಹಾಗೂ ಇತರರು ಈ ಸಂದರ್ಭ ಜೊತೆಗಿದ್ದರು.







