ಮರ್ಧಾಳ: ಯುವಕನಿಗೆ ಚಾಕುವಿನಿಂದ ಇರಿತ

ಕಡಬ, ಜು.24. ಇಲ್ಲಿನ ಕೆಂಚಭಟ್ರೆ ಎಂಬಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಕೋಡಂದೂರು ನಿವಾಸಿ ಮರ್ಧಾಳದಲ್ಲಿ ಫ್ಯಾನ್ಸಿ ಅಂಗಡಿಯನ್ನು ಹೊಂದಿರುವ ತೀರ್ಥೇಶ್(29) ಎಂಬಾತನಿಗೆ ಕೆಂಚಭಟ್ರೆ ಎಂಬಲ್ಲಿ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಮೊಬೈಲನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಕೃತ್ಯ ಎಸಗಿದವರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಯಾರೋ ಸ್ಥಳೀಯರು ಪೂರ್ವದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ಗಾಯಗೊಂಡಿರುವ ತೀರ್ಥೇಶ್‌ರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





