ನನ್ನ ವಿರುದ್ಧ ಇದೊಂದು ವ್ಯವಸ್ಥಿತ ಪಿತೂರಿ: ನರಸಿಂಗ ಯಾದವ್

ಹೊಸದಿಲ್ಲಿ, ಜು.24: ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣಗೊಂಡಿರುವ ಭಾರತದ ಖ್ಯಾತ ಕುಸ್ತಿಪಟು ನರಸಿಂಗ ಯಾದವ್ ಅವರು ರಿಯೋ ಒಲಿಂಪಿಕ್ಸ್‌ನ 74 ಕೆ.ಜಿ. ವಿಭಾಗದ ಕುಸ್ತಿ ವಿಭಾಗದ ಸ್ಪರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿರುವ ತನ್ನನ್ನು ಕೂಟದಿಂದ ಹೊರದಬ್ಬಲು ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
‘‘ ನಾನು ಅಮಾಯಕ. ನನ್ನ ವಿರುದ್ಧ ಇದೊಂದು ವ್ಯವಸ್ಥಿತ ಒಳಸಂಚು ಆಗಿದೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘‘ ನಾನು ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿಲ್ಲ. ಭಾರತದ ಒಲಿಂಪಿಕ್ಸ್ ಅಸೋಸಿಯೇಶನ್ ನನಗೆ ಬೆಂಬಲ ನೀಡಲಿದೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 5ರಂದು ಸೋನಾಪತ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ನಡೆಸಲಾದ ಡೋಪಿಂಗ್ ಟೆಸ್ಟ್‌ನಲ್ಲಿ ನರಸಿಂಗ ಅನುತ್ತೀರ್ಣಗೊಂಡಿದ್ದರು. ಸ್ಯಾಂಪಲ್ ‘ಎ’ ಮತ್ತು ‘ಬಿ’ ಪರೀಕ್ಷೆಯಲ್ಲಿ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಬೆಳಕಿಗೆ ಬಂದಿತ್ತು.
ನರಸಿಂಗ ಯಾದವ್ ಶನಿವಾರ ಶಿಸ್ತು ಸಮಿತಿಯ ಮುಂದೆ ಹಾಜರಾಗಿದ್ದರು.ಸಮಿತಿಯು ಈ ಬಗ್ಗೆ ಹೆಚ್ಚಿನ ವಿವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಸಮಗ್ರ ವರದಿ ಬಂದಿಲ್ಲ ಎಂದು ನಾಡಾದ ಡಿಜಿ ನವೀನ್ ಅಗರ್‌ವಾಲ್ ತಿಳಿಸಿದ್ದಾರೆ.‘‘ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶದಿಂದ ನರಸಿಂಗ ವಂಚಿತಗೊಳ್ಳುವ ಸಾ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ‘‘ಎಲ್ಲ ಪ್ರಕ್ರಿಯೆ ಮುಗಿಯದೆ ಏನನ್ನು ಹೇಳಲು ಸಾಧ್ಯವಿಲ್ಲ’’ ಎಂದು ಹೇಳಿದ್ಧಾರೆ.







