ತಿಗಣೆ ಕಾಟದಿಂದ ಮುಕ್ತರಾಗಲು ಇಲ್ಲಿವೆ ಸುಲಭ ಉಪಾಯಗಳು

ತಿಗಣೆಗಳು ನಿಮ್ಮ ರಕ್ತ ಹೀರುವ ಕಾರಣದಿಂದಲೇ ದೇಹದ ಮೇಲೆ ಕಚ್ಚಿದ ಗುರುತುಗಳು ಇರುವುದು. ಈ ಜೀವಿಗಳನ್ನು ಬೇಗನೇ ನಾಶ ಮಾಡದಿದ್ದರೆ ಇಡೀ ಮನೆಯನ್ನು ಕೆಲವೇ ಸಮಯದಲ್ಲಿ ವ್ಯಾಪಿಸಿಬಿಡಲಿವೆ. ವೃತ್ತಿಪರ ಕೀಟನಾಶಕ ಸಿಂಪಡಿಸುವವರನ್ನು ಕರೆದು ಈ ಸಮಸ್ಯೆಯಿಂದ ಮುಕ್ತಿಪಡೆಯಬಹುದು. ಆದರೆ ವೃತ್ತಿಪರರು ಅಗ್ಗವಾಗಿ ಸಿಗರು. ಇದಕ್ಕಾಗಿ ನೀವೇ ಮನೆಯಲ್ಲಿ ಕೆಲವು ತಿಗಣೆ ನಾಶದ ಕೆಲಸಕ್ಕೆ ಇಳಿಯಬಹುದು. ಮುಖ್ಯವಾಗಿ ತಿಗಣೆ ಇರುವುದನ್ನು ತಿಳಿದುಕೊಳ್ಳುವುದು ಹೇಗೆ?
►ಬೆಳಗ್ಗೆ ಎದ್ದಾಗ ಮೈಮೇಲೆ ಸಣ್ಣ ಚುಚ್ಚಿದ ಗುರುತು
►ನಿಮ್ಮ ಮಂಚಕ್ಕೆ ಹಾಸಿದ ಬಟ್ಟೆಗಳ ಮೇಲೆ ಸಣ್ಣ ಕೆಂಪು ಅಥವಾ ಕಂದು ಬಣ್ಣದ ಗುರುತುಗಳು
►ತೆಳುವಾದ ಹಳದಿ ವಸ್ತುಗಳು ಮಂಚದಲ್ಲಿದ್ದರೆ, ಅವುಗಳನ್ನು ತಿಗಣೆಗಳೇ ಹೊರಹಾಕಿರುತ್ತವೆ.
► ಸೂಕ್ಷ್ಮವಾಗಿ ನೋಡಿದರೆ ಜೀವಂತ ತಿಗಣೆಗಳೂ ಕಾಣ ಸಿಗಲಿವೆ.
ತಿಗಣೆಗಳನ್ನು ಹುಡುಕುವುದು ಕಷ್ಟವಾಗಿದ್ದರೆ ಅವು ಹೆಚ್ಚು ವ್ಯಾಪಿಸಿಲ್ಲ ಎಂದು ತಿಳಿಯಬಹುದು. ಆದರೆ ಅವುಗಳಿದೆ ಎಂದು ದೃಢವಾದ ಕೂಡಲೇ ಕ್ರಮ ಕೈಗೊಳ್ಳಬೇಕು. ವೃತ್ತಿಪರರನ್ನು ತರಲು ಸಾಧ್ಯವಾಗದೆ ಇದ್ದರೆ ಸ್ವತಃ ನೀವೇ ಅವುಗಳಿಂದ ಮುಕ್ತಿಪಡೆಯಲು ಇಲ್ಲಿ ಕೆಲವು ಹಾದಿಗಳಿವೆ:
1. ತಿಗಣೆಗಳು ಬೀಡು ಬಿಡುವ ಸ್ಥಳ ಕಡಿಮೆ ಮಾಡಿ: ಕೀಟನಾಶಕ ಅಂಶವಿರುವ ಚೋಕ್ ತೆಗೆದುಕೊಂಡು ಗೋಡೆಗಳಲ್ಲಿ ವುತ್ತು ನೆಲದ ಮೇಲೆ ಗೆರೆ ಎಳೆಯಿರಿ.
2. ತಿಗಣೆಗಳ ಅಡಗುತಾಣದ ಮೇಲೆ ಬೇಕಿಂಗ್ ಸೋಡಾ ಹಾಕಿ: ಚೋಕ್ ಲಭ್ಯವಿಲ್ಲದೆ ಇದ್ದಲ್ಲಿ ಬೇಕಿಂಗ್ ಸೋಡಾ ಬಳಸಿ. ತಿಗಣೆಗಳ ಗೂಡುಗಳಿಗೆ ಅವುಗಳನ್ನು ಬಿಡಿ. ಕೀಟಗಳನ್ನು ಕೊಲ್ಲಲು ಇದು ಉತ್ತಮ ವಿಧಾನ.
3. ಆಲ್ಕೋಹಾಲ್ ಹಾಕಿ ಮುಳುಗಿಸಿ: ಅತೀ ದುಬಾರಿ ವಿಷವನ್ನು ಖರೀದಿಸಿ ತಿಗಣೆ ಕೊಲ್ಲುವ ಬದಲಾಗಿ ಆಲ್ಕೋಹಾಲ್ ಬಳಸಿ. ತಿಗಣೆ ಕಂಡಲ್ಲೆಲ್ಲ ಆಲ್ಕೋಹಾಲ್ ಸಿಂಪಡಿಸುತ್ತಾ ಹೋಗಿ.
4. ಡಕ್ಟ್ ಟೇಪ್ ಬಳಸಿ: ಮಂಚದ ಮೇಲೆ ಕೆಲವು ತಿಗಣೆಗಳು ಕಂಡ ಕೂಡಲೇ ಟೇಪ್ ಹಿಡಿದು ಅವುಗಳನ್ನು ಅಂಟಿಸಿಕೊಳ್ಳಿ. ನಂತರ ಅದನ್ನು ಪ್ಲಾಸ್ಟಿಕ್ ಬ್ಯಾಗಿಗೆ ತುಂಬಿ ಮುಚ್ಚಿ ಹೊರಗೆ ಎಸೆಯಿರಿ.
5. ಲ್ಯಾವೆಂಡರ್ ಎಣ್ಣೆ ಹಾಕಿ: ತಿಗಣೆಗಳು ಅಡಗಿಕೊಂಡಲ್ಲಿಗೆ ಲ್ಯಾವೆಂಡರ್ ಎಣ್ಣೆ ಹಾಕಿ. ಇದು ತಾಜಾ ಹೂವಿನ ವಾಸನೆಯ ಮೂಲಕ ತಿಗಣೆಗಳನ್ನು ನಿವಾರಿಸುತ್ತದೆ.
6. ಪುದೀನ ಎಲೆಗಳನ್ನು ಹಾಕಿ: ಪುದೀನ ಎಲೆಗಳ ವಾಸನೆಯನ್ನು ತಿಗಣೆಗಳು ಇಷ್ಟಪಡುವುದಿಲ್ಲ. ಹೀಗಾಗಿ ಪುದೀನ ಎಲೆಗಳನ್ನು ಹಾಕುವುದು ಉತ್ತಮ.
7. ವ್ಯಾಕ್ಯೂಮ್ ಕ್ಲೀನರ್ ಮೂಲಕ ನಿವಾರಿಸಿ: ಮನೆಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಇದ್ದಲ್ಲಿ ತಿಗಣೆ ಮತ್ತು ಅವುಗಳ ಮೊಟ್ಟೆ ಎರಡನ್ನೂ ನಿವಾರಿಸಬಹುದು. ವ್ಯಾಕ್ಯೂಮ್ ಬ್ಯಾಗನ್ನು ಪ್ಲಾಸ್ಟಿಕ್ ಬ್ಯಾಗಲ್ಲಿ ಸೀಲ್ ಮಾಡಿ ಸರಿಯಾಗಿ ಎಸೆಯಿರಿ.
8. ಸ್ಟೀಮ್ ಕ್ಲೀನರ್ ಬಳಸಿ: ಅಧಿಕ ಉಷ್ಣತೆಯನ್ನು ತಿಗಣೆಗಳು ಸಹಿಸುವುದಿಲ್ಲ. ಹೀಗಾಗಿ ಸ್ಟೆಮ್ ಕ್ಲೀನರನ್ನು ಬಳಸಿ ಅವುಗಳನ್ನು ಕೊಲ್ಲಬಹುದು.
9. ಹೇರ್ ಡ್ರೈಯರ್ ಬಳಸಿ: ಸ್ಟೀಮ್ ಕ್ಲೀನರ್ ಇಲ್ಲದಿದ್ದರೆ ಹೇರ್ ಡ್ರೈಯರ್ ಬಳಸಬಹುದು. ಅತೀ ಎತ್ತರದಲ್ಲಿ ಹಿಡಿದು ತಿಗಣೆಗಳಿಗೆ ಗುರಿ ಮಾಡಿ.
10. ಬಿಸಿನೀರು: ಮಂಚದ ಬಟ್ಟೆ, ಬ್ಲಾಂಕೆಟ್, ಕರ್ಟನನ್ನು ಬಿಸಿ ನೀರಲ್ಲಿ ತೊಳೆಯಿರಿ. ಅವುಗಳನ್ನು ಸರಿಯಾಗಿ ಒಣಗಿಸಿ. ಒಣಗಿದ ಮೇಲೆ ಅದನ್ನು ಪ್ಲಾಸ್ಟಿಕ್ ಬ್ಯಾಗಲ್ಲಿ ಹಾಕಿಟ್ಟು ನಂತರ ತಿಗಣೆ ನಿವಾರಿಸುವ ಕೆಲಸಕ್ಕೆ ಇಳಿಯಿರಿ.
ಕೃಪೆ: www.healthdigezt.com







