Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೋರಾಟ ದಿಕ್ಕು ತಪ್ಪಲು ಕೇಜ್ರಿವಾಲ್ ಕಾರಣ

ಹೋರಾಟ ದಿಕ್ಕು ತಪ್ಪಲು ಕೇಜ್ರಿವಾಲ್ ಕಾರಣ

ಪ್ರಶಾಂತ್ ಭೂಷಣ್ ಕಿಡಿ

ವಾರ್ತಾಭಾರತಿವಾರ್ತಾಭಾರತಿ24 July 2016 11:01 PM IST
share
ಹೋರಾಟ ದಿಕ್ಕು ತಪ್ಪಲು ಕೇಜ್ರಿವಾಲ್ ಕಾರಣ

ಖ್ಯಾತ ವಕೀಲ- ಹೋರಾಟಗಾರ ಪ್ರಶಾಂತ್‌ಭೂಷಣ್ ಮತ್ತೊಂದು ವಿಜಯದ ನಗೆ ಬೀರಿದ್ದಾರೆ. ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರು ಕಲ್ಲಿದ್ದಲು ಗಣಿ ಹಂಚಿಕೆ ಹಗರಣದ ವಿಚಾರಣೆಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷಿಗಳು ಲಭಿಸಿವೆ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿದ ಸಮಿತಿ ಬಹಿರಂಗಪಡಿಸುವುದರೊಂದಿಗೆ ಪ್ರಶಾಂತ್‌ಭೂಷಣ್ ಅವರ ಸುದೀರ್ಘ ಹೋರಾಟಕ್ಕೆ ಪ್ರತಿಫಲ ಸಿಕ್ಕಿದಂತಾಗಿದೆ. ಸಿನ್ಹಾ ಅವರು 50 ರಿಂದ 60 ಬಾರಿ ತಮ್ಮ ನಿವಾಸದಲ್ಲಿ, ಆರೋಪಿಗಳನ್ನು ಭೇಟಿ ಮಾಡಿ ತನಿಖೆಯಲ್ಲಿ ಪ್ರಭಾವ ಬೀರಲು ಮುಂದಾಗಿರುವುದಕ್ಕೆ ಭೂಷಣ್ ಸಲ್ಲಿಸಿದ್ದ ಸಂದರ್ಶಕ ಡೈರಿಯನ್ನು ಸುಪ್ರೀಂಕೋರ್ಟ್ ದಾಖಲೆಯಾಗಿ ಮಾನ್ಯ ಮಾಡಿದೆ.
ಆಡಳಿತ, ಪೊಲೀಸ್ ಹಾಗೂ ಮಾಧ್ಯಮದ ರಹಸ್ಯ ಬಹಿರಂಗಪಡಿಸು ವವರ ಕೇಂದ್ರ ಬಿಂದುವಾಗಿ ಪ್ರಶಾಂತ್ ಭೂಷಣ್ ಬೆಳೆದಿದ್ದಾರೆ. ಭ್ರಷ್ಟಾಚಾರ, ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಬಹಿರಂಗಪಡಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.
‘‘ಇಂಡಿಯಾ ಅಗೆನೆಸ್ಟ್ ಕರಪ್ಷನ್’’ ಆಂದೋಲನದ ಮೂಲಕ ಹೋರಾಟದ ಮುಖ್ಯವಾಹಿನಿಗೆ ಬಂದ ಪ್ರಶಾಂತ್‌ಭೂಷಣ್, ಅಣ್ಣಾ ಹಝಾರೆ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆಗೆ ದೇಶಾದ್ಯಂತ ಸುದ್ದಿ ಮಾಡಿದರು. ಆದರೆ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ನಿಲುವಿನ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಜತೆಗೇ ಬೀದಿಜಗಳಕ್ಕೆ ಇಳಿದರು. ಈ ಕೂಟದಿಂದ ಬೇರ್ಪಟ್ಟ ಭೂಷಣ್, ಸ್ವರಾಜ್ ಅಭಿಯಾನ್ ಎಂಬ ಹೊಸ ಚಳವಳಿ ಹುಟ್ಟುಹಾಕಿದರು. ಇದು ದೈನಂದಿನ ರಾಜಕೀಯಕ್ಕೆ ಸೈದ್ಧಾಂತಿಕ ನೆಲೆ ಒದಗಿಸುವ ಉದ್ದೇಶ ಹೊಂದಿದೆ. ಈ ಸಂಘಟನೆ ಹುಟ್ಟುಹಾಕಿದ ಬಳಿಕವೂ ಭ್ರಷ್ಟಾಚಾರ ವಿರುದ್ಧ ನ್ಯಾಯವ್ಯವಸ್ಥೆ ಬೆನ್ನಟ್ಟುವಂತೆ ಮಾಡಿದರು. ರಿಲಯನ್ಸ್ ಗ್ಯಾಸ್ ಹಗರಣ, ಎಸ್ಸಾರ್ ಟೇಪ್ಸ್ ಮತ್ತು ಇ-ಮೇಲ್ ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ವ್ಯಾಪಂ ಹಗರಣದಂತಹ ಹತ್ತು ಹಲವು ಪ್ರಕರಣಗಳಲ್ಲಿ ಸದ್ದು ಮಾಡಿದರು. ಇಷ್ಟಾಗಿಯೂ, ಇಂತಹ ದೈತ್ಯ ಹಗರಣಗಳನ್ನು ಬಯಲುಗೊಳಿಸಲು ವಿಸ್ತೃತ ಜಾಲದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದ್ದಾರೆ. ಇದೀಗ ಇಂತಹ ರಹಸ್ಯಗಳನ್ನು ಬಯಲಿಗೆಳೆಯುವವರ ಹೊಸ ಸಂಘಟನೆ ಹುಟ್ಟುಹಾಕಲು ಸಜ್ಜಾಗಿದ್ದಾರೆ. ಅವರ ಜತೆ ನಡೆಸಿದ ಸಂದರ್ಶನದ ಮುಖ್ಯ ಆಂಶಗಳು ಇವು..

 ರಂಜಿತ್ ಸಿನ್ಹಾ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್ ನಿರ್ಧರಿಸಿರುವುದು ನಿಮಗೆ ತೃಪ್ತಿ ತಂದಿದೆಯೇ?
    -ನ್ಯಾಯಾಲಯ ಇಂತಹ ಗಂಭೀರ ವಿಷಯವನ್ನು ಮುಂದೆ ಒಯ್ಯಲು ನಿರ್ಧರಿಸಿರುವುದು ಸಂತಸ ತಂದಿದೆ. ಸಿಬಿಐ ನಿರ್ದೇಶಕರು ಅನಧಿಕೃತವಾಗಿ, ಕದ್ದು ಮುಚ್ಚಿ, ಏಜೆನ್ಸಿ ತನಿಖೆ ನಡೆಸುತ್ತಿದ್ದ ದೊಡ್ಡ ಅರೋಪಿ ಕುಳಗಳನ್ನು ಭೇಟಿ ಮಾಡಿದ್ದರು. ಸಿನ್ಹಾ ಅವರ ತನಿಖಾ ವರದಿ ಕುರಿತ ಕಡತಗಳನ್ನೂ ಅವರು ಪರಿಶೀಲಿಸುತ್ತಿದ್ದರು. ಇದು ದೇಶದ ಪ್ರಮುಖ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಮಗ್ರತೆಗೆ ಸಂಬಂಧಿಸಿದ ವಿಚಾರ. ಈ ಹಿನ್ನೆಲೆಯಲ್ಲಿ ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.

 ಸಂದರ್ಶಕರ ಪುಸ್ತಕ ನಿಮ್ಮ ಕೈಸೇರಿದ್ದು ಹೇಗೆ?
    -ಅವರದ್ದೇ ಏಜೆನ್ಸಿಯ ಕೆಲವರಿಂದಲೇ ಅದು ಆಚೆಗೆ ಬಂದಿದೆ. ಅವರ ನಿವಾಸದ ರಕ್ಷಣೆಯ ಹೊಣೆ ಹೊತ್ತಿದ್ದವರಲ್ಲೇ ಒಬ್ಬರು ಈ ಡೈರಿಯನ್ನು ನನಗೆ ನೀಡಿದರು. ಆದರೆ ಆತನ ಹೆಸರು ಅಥವಾ ಗುರುತು ಕೇಳುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ.

 ಆಡಳಿತ ಯಂತ್ರ, ಪೊಲೀಸ್ ಹಾಗೂ ಮಾಧ್ಯಮದ ರಹಸ್ಯ ಬಯಲುಗೊಳಿಸುವವರ ಪಾಲಿಗೆ ನೀವು ಐಕಾನ್ ಏಕೆ? ಅವರು ನಿಮ್ಮ ಮೇಲೆ ಏಕೆ ವಿಶ್ವಾಸ ಇಟ್ಟಿದ್ದಾರೆ?
    -ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಪ್ರಕರಣಗಳಲ್ಲಿ ನಾನು ಸಕ್ರಿಯವಾಗಿದ್ದೇನೆ. ಅದು ಕೂಡಾ ದೊಡ್ಡ ಕುಳಗಳನ್ನೊಳಗೊಂಡ ಭ್ರಷ್ಟಾಚಾರ ಪ್ರಕರಣಗಳನ್ನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಒಂದಷ್ಟು ಕೆಲಸ ಮಾಡುತ್ತಿದ್ದೇನೆ ಎಂಬುದು ಜನರಿಗೆ ತಿಳಿಯಿತು. ಜನ ನನ್ನ ಬಳಿಗೆ ಬಹಳ ಹಿಂದಿನಿಂದಲೂ ಬರುತ್ತಿದ್ದರು. ಈ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೂಡಾ ಸಮರ್ಪಕ ಮಾಹಿತಿಯ ಹಿನ್ನೆಲೆಯಲ್ಲಿ ಸಲ್ಲಿಸಿದವುಗಳು. ಭ್ರಷ್ಟಾಚಾರ ವಿರುದ್ಧ ಬಹಳ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದೇನೆ. ಬಹುಶಃ ಮೊದಲ ದೊಡ್ಡ ಪ್ರಕರಣ 1990ರ ದಶಕದ ಬೋಫೋರ್ಸ್ ಹಗರಣ.

 ಅದು ಎಷ್ಟರಮಟ್ಟಿಗೆ ಸಾಧ್ಯವಾಯಿತು?
    -ಬೋಫೋರ್ಸ್ ಹಗರಣದಲ್ಲಿ ದುರದೃಷ್ಟಕರ ಅಂಶವೆಂದರೆ ನ್ಯಾಯಾಲಯ ಪದೇ ಪದೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿತು. ಆಗ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಅದು ಕೂಡಾ ಹಸ್ತಕ್ಷೇಪ ಮಾಡಿತು. ಮಾಧವಸಿಂಗ್ ಸೋಳಂಕಿ ಪ್ರಕರಣದಂತೆ, ಕೆಲ ಸಮಯದ ಬಳಿಕ ನಾನು ಕೂಡಾ ಪ್ರಕರಣದ ಬಗ್ಗೆ ಹೋರಾಡಿ ಸುಸ್ತಾಗಿ, ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬಿಟ್ಟುಬಿಟ್ಟೆ.

    ಪ್ರಕರಣದಿಂದ ಬೆಳಕಿಗೆ ಬಂದದ್ದು ಏನು?
    -ಇಲ್ಲಿ ಒಟ್ಟಾವಿಯೊ ಕ್ವಟ್ರೋಚಿ ಲಂಚ ನೀಡಿರುವುದು ಸುಸ್ಪಷ್ಟ. ಇದು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ವಿಸ್ ಬ್ಯಾಂಕ್ ಬಿಡುಗಡೆ ಮಾಡಿದ ದಾಖಲೆಗಳಿಂದಲೂ ಸ್ಪಷ್ಟವಾಗುತ್ತದೆ. ಈ ಹಗರಣದಲ್ಲಿ ಕ್ವಟ್ರೋಚಿ ದಲ್ಲಾಳಿ ಅಲ್ಲ ಎಂದಾದರೆ ಅವರು ಹಣ ನೀಡಿದ್ದು ಏಕೆ?

ಅದಕ್ಕೆ ಎಲ್ಲಿ ತಡೆ ಉಂಟಾಯಿತು?
    -ತನಿಖೆ ಪೂರ್ಣಗೊಂಡಿತು. ಆದರೆ ವಿಚಾರಣೆ ಹಂತದಲ್ಲಿ ಇದಕ್ಕೆ ತಡೆ ಉಂಟಾಯಿತು. ನ್ಯಾಯಾಲಯ ಪದೇ ಪದೇ ಹಸ್ತಕ್ಷೇಪ ಮಾಡಿ ಹಲವು ಅಂಶಗಳನ್ನು ತಿರಸ್ಕರಿಸಿತು. ಸಿಬಿಐ ಕೂಡಾ ಅದನ್ನು ಮುಂದಕ್ಕೆ ಒಯ್ಯಲಿಲ್ಲ. ಮುಂದೆ ಯಾರು ಕೂಡಾ ಅದನ್ನು ಮಾಡಲಿಲ್ಲ.

ಮುಂದಿನ ಸರಕಾರಗಳು ಕೂಡಾ ಇದನ್ನು ಕೈಗೆತ್ತಿಕೊಳ್ಳಲಿಲ್ಲವೇ?
- ಇಲ್ಲ. ಕಾಂಗ್ರೆಸ್ಸೇತರ ಸರಕಾರಗಳು ಕೂಡಾ ಇದನ್ನು ಕೈಗೆತ್ತಿಕೊಳ್ಳಲಿಲ್ಲ. ನನ್ನ ಅನುಭವದ ಪ್ರಕಾರ, ದೊಡ್ಡ ರಾಜಕೀಯ ಪಕ್ಷಗಳು ಇಂತಹ ಭ್ರಷ್ಟಾಚಾರ ಪ್ರಕರಣಗಳನ್ನು ವಿರೋಧಿ ರಾಜಕೀಯ ಪಕ್ಷಗಳ ವಿರುದ್ಧ ರಾಜಕೀಯ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುತ್ತವೆ. ಆದರೆ ಆ ಪ್ರಕರಣವನ್ನು ಮುಂದುವರಿಸಲು ಇವುಗಳಿಗೆ ಆಸಕ್ತಿ ಇರುವುದಿಲ್ಲ. ವಿಚಾರಣೆ ನಡೆಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಅವರನ್ನು ಜೈಲಿಗೆ ತಳ್ಳುವ ಆಸಕ್ತಿ ಅವರಿಗೆ ಇರುವುದಿಲ್ಲ. ಏಕೆಂದರೆ ಮಧ್ಯವರ್ತಿಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಎಲ್ಲ ಪಕ್ಷಗಳಿಗೂ ಸಮಾನವಾಗಿರುತ್ತವೆ. ಆದ್ದರಿಂದ ಈ ಬಗ್ಗೆ ಅವುಗಳಿಗೆ ಆಸಕ್ತಿ ಇರುವುದಿಲ್ಲ.

ಇದನ್ನು ನೀವು ಬೊಪೋರ್ಸ್ ಪ್ರಕರಣದಲ್ಲಿ ಕಂಡಿದ್ದೀರಿ. ಮೋದಿ ಸರಕಾರ ಭ್ರಷ್ಟಾಚಾರ ಪ್ರಕರಣಗಳನ್ನು ಮುಂದುವರಿಸುತ್ತದೆ ಎನಿಸುತ್ತದೆಯೇ?
    -ಇಲ್ಲ. ಉದಾಹರಣೆಗೆ ಎಸ್ಸಾರ್ ಇಮೇಲ್‌ಗಳು ಅಥವಾ ಎಸ್ಸಾರ್ ಟೇಪ್, ರಿಲಯನ್ಸ್ ಗ್ಯಾಸ್ ಒಪ್ಪಂದ ಇಲ್ಲವೇ 4 ಜಿ ಹಗರಣ ಇರಬಹುದು. ಉದಾಹರಣೆಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿವರಿಸಿದಂತೆ ರಿಲಯನ್ಸ್ ಅನಿಲ ಒಪ್ಪಂದದಲ್ಲಿ ರಿಲಯನ್ಸ್ ಹೆಚ್ಚುವರಿ ಇನ್‌ವೈಸ್ ಕಳುಹಿಸಿದ್ದು ಸ್ಪಷ್ಟವಿತ್ತು. ಆದರೂ ಮೋದಿ ಸರಕಾರ ಏಕೆ ಅದನ್ನು ತನಿಖೆ ಮಾಡುತ್ತಿಲ್ಲ? ರಿಲಯನ್ಸ್ ಎಲ್ಲ ರಾಜಕೀಯ ಪಕ್ಷಗಳಿಗೂ ದೇಣಿಗೆ ನೀಡುತ್ತದೆ.

ಎಸ್ಸಾರ್ ಇಮೇಲ್‌ಗಳ ಬಗ್ಗೆ?
    -ಪಕ್ಷಭೇದವಿಲ್ಲದೇ ಕಂಪೆನಿ ರಾಜಕಾರಣಿಗಳಿಗೆ ಲಂಚ ನೀಡುತ್ತಿದೆ ಎನ್ನುವುದನ್ನು ಎಸ್ಸಾರ್ ಇ-ಮೇಲ್‌ಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಇದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಐಷಾರಾಮಿ ಬೋಟ್ ನೀಡಿದ್ದು, ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಮೊಮ್ಮಗಳಿಗೆ ಉದ್ಯೋಗ ನೀಡುವ ಮೂಲಕ ಉಡುಗೊರೆ ನೀಡಿದ್ದು, ಕಾಂಗ್ರೆಸ್‌ನ ಪ್ರಕಾಶ್ ಜೈಸ್ವಾಲ್ ಹಾಗೂ ದಿಗ್ವಿಜಯ್ ಸಿಂಗ್ ಕೂಡಾ ಫಲಾನುಭವಿಗಳಲ್ಲಿ ಸೇರಿದ್ದಾರೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಪ್ರಭಾವವನ್ನು ಖರೀದಿ ಮಾಡಿಕೊಂಡು ಎಲ್ಲ ರಾಜಕೀಯ ಪಕ್ಷಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಿವೆ.

ಎಸ್ಸಾರ್ ಟೇಪ್‌ಗಳು ನೀರಾ ರಾಡಿಯಾ ಟೇಪ್‌ಗಳಿಗಿಂತಲೂ ದೊಡ್ಡವು ಹೇಗೆ?
    -ಎಸ್ಸಾರ್ ಟೇಪ್‌ಗಳು ವಾಸ್ತವವಾಗಿ ಅಪರಾಧದಲ್ಲಿ ಶಾಮೀಲಾದವರ ಜತೆ ನಡೆಸಿದ ಸಂವಾದಗಳು. ಜನರು ಅಪರಾಧಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಹಾಗೂ ಹಲವು ಮಂದಿ ಸರಕಾರಿ ಅಧಿಕಾರಿಗಳು ಹಾಗೂ ಸಚಿವರು; ಹಲವು ಮಂದಿ ರಿಲಯನ್ಸ್ ಅಧಿಕಾರಿಗಳು ತಮ್ಮ್‌ಂದಿಗೇ ಮಾತುಕತೆ ನಡೆಸುತ್ತಿದ್ದಾರೆ. ಅಧಿಕ ಇನ್‌ವೈಸ್ ಹಾಕಿರುವುದು ಮತ್ತು ಲಂಚ ನೀಡಿರುವ ಬಗ್ಗೆ ಅವರೇ ಒಪ್ಪಿಕೊಳ್ಳುತ್ತಾರೆ. ಇವೆಲ್ಲ ನಡೆದದ್ದು 2002-2008ರ ಅವಧಿಯಲ್ಲಿ. ಇಲ್ಲಿ ನಾನು ಈ ಟೇಪ್ ಕೇಳಿಲ್ಲ. ಆದರೆ ಅದರಲ್ಲಿ ಏನು ಹೇಳಿದೆ ಎಂಬ ಬಗ್ಗೆ ಕೇಳಿದ್ದೇನೆ. ಅವು ಹಾನಿಕಾರಕ. ಇವು ತಪ್ಪು ಹಾಗೂ ಲಂಚ ಕೃತ್ಯಗಳು.

ಎಸ್ಸಾರ್ ಇ-ಮೇಲ್ ಹೇಗೆ ಪಡೆದಿರಿ?
    -ಎಸ್ಸಾರ್ ಕಂಪೆನಿಯ ರಹಸ್ಯ ಮಾಹಿತಿ ಸ್ಫೋಟದಾರರೊಬ್ಬರು ಇದರಲ್ಲಿ ಸಹಕರಿಸಿದರು.

ವಿಷಲ್‌ಬ್ಲೋವರ್‌ಗಳು ಹೋಗಲು ಸ್ವತಂತ್ರ ಸಂಸ್ಥೆ ಇರಲಿಲ್ಲವೇ?
    -ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ವಿಷಲ್‌ಬ್ಲೋವರ್ ಏಜೆನ್ಸಿ ಸ್ಥಾಪಿಸಲಾಗಿದೆ. ಕೇಂದ್ರೀಯ ವಿಚಕ್ಷಣಾ ದಳ ಇಂತಹ ವಿಷಲ್ ಬ್ಲೋವರ್‌ಗಳ ನೋಡೆಲ್ ಏಜೆನ್ಸಿಯಾಗಬೇಕು ಎಂದು ಕೋರ್ಟ್ ಹೇಳಿದೆ. ವಿಷಲ್‌ಬ್ಲೊವರ್‌ಗಳು ನೀಡಿದ ದೂರುಗಳನ್ನು ಸಿವಿಸಿ ತನಿಖೆ ಮಾಡಬೇಕು. ಅವರಿಗೆ ಸೂಕ್ತ ರಕ್ಷಣೆಯನ್ನೂ ನೀಡಬೇಕು. ಆದರೆ ಈ ಕಾರ್ಯದಲ್ಲಿ ಸಿವಿಸಿ ವಿಫಲವಾಗಿದೆ. ಏಕೆಂದರೆ ಇದಕ್ಕೆ ನೇಮಕಗೊಂಡವರು ತೀರಾ ದುರ್ಬಲರು ಹಾಗೂ ತನಿಖೆ ನಡೆಸಲು ಸಾಕಷ್ಟು ಸಿಬ್ಬಂದಿಯೂ ಅವರಲ್ಲಿಲ್ಲ.

ನೀವು ಅಂತಹ ಏಜೆನ್ಸಿ ಆರಂಭಿಸುತ್ತಿದ್ದೀರಾ?
    -ನಾವು ಇಂತಹ ವಿಷಲ್‌ಬ್ಲೋವರ್ ವೇದಿಕೆ ಆರಂಭಿಸಿದ್ದೇವೆ. ಇದರಲ್ಲಿ ಎಂಟು ಮಂದಿ ಸದಸ್ಯರಿದ್ದು, ನ್ಯಾಯಮೂರ್ತಿ ಎ.ಪಿ.ಷಹಾ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಮಾಜಿ ಕಾರ್ಯದರ್ಶಿ ಎಫ್.ಎ.ಎಸ್.ಶರ್ಮಾ, ಅಡ್ಮಿರಲ್ ಲಕ್ಷ್ಮೀ ನಾರಾಯಣ ರಾಮದಾಸ್ ಇತರರು. ಇದು ನಾಲ್ಕೈದು ತಿಂಗಳ ಹಿಂದೆ ರಚನೆಯಾಗಿದೆ. ಆದರೆ ಎಲ್ಲೂ ಡಂಗುರ ಸಾರಿಸಿಕೊಂಡಿಲ್ಲ. ಇದೀಗ ವಿಷಯ ಬ್ಲೋವರ್‌ಗಳು ಈ ವೇದಿಕೆಗೆ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ. ನಮ್ಮ ಕಚೇರಿ ದಿಲ್ಲಿಯಲ್ಲಿದೆ. ಇದಕ್ಕೆ ಶೀಘ್ರವೇ ಪತ್ರಿಕಾಗೋಷ್ಠಿ ನಡೆಸಿ ಮರು ಚಾಲನೆ ನೀಡಲಾಗುವುದು. ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಪ್ರಚಾರ ಆಮ್ಲಜನಕ ಇದ್ದಂತೆ.

ವಿಷಲ್‌ಬ್ಲೋವರ್‌ಗಳಿಗೆ ಮೊದಲ ತಡೆ ಯಾವುದು?
    -ಮೊದಲು ದಾಖಲೆಗಳು ಹಾಗೂ ಸಾಕ್ಷ್ಯಗಳು ಏನನ್ನು ಬಹಿರಂಗಪಡಿಸುತ್ತವೆ, ಅದು ಎಷ್ಟು ಗಂಭೀರ ಅಪರಾಧ ಅಥವಾ ಅಕ್ರಮ ಎನ್ನುವುದನ್ನು ನಾವು ವಿಶ್ಲೇಷಿಸಬೇಕು; ಹೇಗೆ ಕಾನೂನುಬದ್ಧವಾಗಿ ಮಾಡಬಹುದು ಎನ್ನುವುದನ್ನು ನಿರ್ಧರಿಸಬೇಕು, ನ್ಯಾಯಾಲಯ ಸ್ವತಂತ್ರ ತನಿಖೆಗೆ ಆದೇಶಿಸುತ್ತದೆಯೇ ಅಥವಾ ಅವುಗಳ ತನಿಖೆ ನಡೆಸುವಂತೆ ಸರಕಾರಕ್ಕೆ ಆದೇಶಿಸುತ್ತದೆಯೇ ಎನ್ನುವುದರ ಮೇಲೆ ನಿರ್ಧರಿಸಬೇಕು. ಆದರೆ ರಾಡಿಯಾ ಟೇಪ್ ಅಥವಾ ಎಸ್ಸಾರ್ ಇ-ಮೇಲ್‌ಗಳಲ್ಲಿ, ತಪ್ಪುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಗತ್ಯವಾಗಿತ್ತು. ಏಕೆಂದರೆ ಇದರಲ್ಲಿ ಕಾರ್ಪೊರೇಟ್ ಉದ್ಯಮ, ಆಡಳಿತಶಾಹಿ, ರಾಜಕಾರಣಿಗಳು ಒಳಗೊಂಡಿದ್ದರಿಂದ ಈ ಅಪವಿತ್ರ ಮೈತ್ರಿಯನ್ನು ಬಹಿರಂಗಪಡಿಸುವುದು ಅಗತ್ಯವಿತ್ತು. ಮಾಧ್ಯಮಗಳ ಮೂಲಕ ಅಪರಾಧಗಳನ್ನು ಬಹಿರಂಗಪಡಿಸಲು ನಾನು ಒತ್ತು ನೀಡುತ್ತೇನೆ.

 ಈ ಅಪವಿತ್ರ ಮೈತ್ರಿಗಳು ತಮ್ಮದೇ ಅಪರಾಧಗಳನ್ನು ತನಿಖೆ ಮಾಡುವಾಗ ಏನು ಮಾಡುತ್ತೀರಿ?
    -ಈ ಕಾರಣದಿಂದ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಏಕೆಂದರೆ ಅದು ಸಂಪೂರ್ಣ ಸ್ವತಂತ್ರ ಸಂಸ್ಥೆ.

ಆದರೆ ನೀವು ನ್ಯಾಯಾಂಗದ ಅಕ್ರಮಗಳ ಬಗ್ಗೆಯೂ ಮಾತನಾಡಿದ್ದೀರಿ?
    -ಬಹುತೇಕ ಅವರು ಸ್ವತಂತ್ರರು. ಕೆಲ ವೈದ್ಯರ ವೃತ್ತಿಬದ್ಧತೆ ಮಾತ್ರ ಪ್ರಶ್ನಾರ್ಹ. ಅದು ಸಮಸ್ಯೆ. ಆದರೂ ಬಹುತೇಕ ನ್ಯಾಯಾಲಯ ಸ್ವತಂತ್ರವಾಗಿದೆ.

ನ್ಯಾಯಾಲಯ, ಮಾಧ್ಯಮ ಹೊರತುಪಡಿಸಿ ನಿಮಗೆ ಏನು ಅಗತ್ಯ?
    -ನಮಗೆ ಅಗತ್ಯವಿರುವುದು ಜನ ಚಳವಳಿ. ಈ ಕಾರಣಕ್ಕೆ ನಾವು ಸ್ವರಾಜ್ ಅಭಿಯಾನ ಆರಂಭಿಸಿದ್ದೇವೆ. ಇದು ಭ್ರಷ್ಟಾಚಾರದ ವಿರುದ್ಧ, ರೈತ ಸಮಸ್ಯೆಗಳ ಬಗ್ಗೆ, ಕೋಮುವಾದ, ಶಿಕ್ಷಣ ಹಾಗೂ ಉದ್ಯೋಗ ಎಲ್ಲದರ ಬಗ್ಗೆಯೂ ಧ್ವನಿ ಎತ್ತುತ್ತದೆ.

 ಅಣ್ಣಾ ಹಝಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಜತೆಗಿನ ನಿಮ್ಮ ಪ್ರಯತ್ನದಲ್ಲಿ ಎಲ್ಲಿ ತೊಡಕು ಉಂಟಾಯಿತು?
    -ಅಣ್ಣಾ ಹಝಾರೆ ಸಭ್ಯರು. ಸರಳ ಸ್ವಭಾವದ ವ್ಯಕ್ತಿ. ಹಲವು ವಿಷಯಗಳ ಬಗ್ಗೆ ಅವರಿಗೆ ಅರ್ಥವಾಗುವುದಿಲ್ಲ. ಆದರೆ ಅವರು ಖಂಡಿತವಾಗಿಯೂ ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಬಲ್ಲ ಸಾಹಸಿ. ಆದರೆ ಕೇಜ್ರಿವಾಲ್ ಪಾತ್ರ ಎಲ್ಲವನ್ನೂ ದಾರಿ ತಪ್ಪುವಂತೆ ಮಾಡಿತು. ಅವರು ಇಷ್ಟು ನಿರ್ಲಜ್ಜರು ಎಂದುಕೊಂಡಿರಲಿಲ್ಲ. ತಮ್ಮ ಕೆಲಸ ಸಾಧಿಸಿಕೊಳ್ಳಲು ಯಾವ ಹಾದಿ ಹಿಡಿಯಲೂ ಅವರು ಸಿದ್ಧರಿದ್ದರು. ರಾಜಕೀಯ ಅಧಿಕಾರ ಪ್ರಯೋಜನಕಾರಿ. ಆದರೆ ಅದರಲ್ಲೇ ಚಳವಳಿ ಕೊನೆಗೊಳ್ಳಬಾರದು. ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅದು ಸಾಧನವಷ್ಟೇ ಆಗಬೇಕು.

    ಕೇಜ್ರಿವಾಲ್ ನಿರ್ಲಜ್ಜ ಹೇಗೆ?
    -ಉದಾಹರಣೆಗೆ 2014ರ ಲೋಕಸಭಾ ಚುನಾವಣೆಯಲ್ಲಿ, ಹತಾಶ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷದ ಜತೆ ರಹಸ್ಯ ಒಪ್ಪಂದಕ್ಕೆ ಮುಂದಾದರು. ಹೊಸ ಚುನಾವಣೆ ಸೂಕ್ತ ಎಂದು ಕೋರ್ಟ್ ಹೇಳಿದರೂ, ದಿಲ್ಲಿಯಲ್ಲಿ ಸರಕಾರ ರಚನೆಗೆ ಮುಂದಾದರು.

    ಅಂತಿಮವಾಗಿ ಚುನಾವಣೆ ಘೋಷಣೆಯಾದಾಗ ನೀವು ಅದರ ಭಾಗವಾಗಿರಲಿಲ್ಲವೇ?
    -ಆಗ ಕೇಜ್ರಿವಾಲ್ ಬಗ್ಗೆ ನನಗೆ ರೋಸಿಹೋಗಿತ್ತು. ಮತ್ತೆ ಅಧಿಕಾರಕ್ಕೆ ಬರುವ ಅವರ ಎಲ್ಲ ಹುನ್ನಾರಗಳಿಂದಾಗಿ. ಉದಾಹರಣೆಗೆ ಆಮ್ ಆದ್ಮಿ ಪಕ್ಷದ ಸ್ವಯಂಸೇವಾ ಮಂಚ್, ತಮ್ಮ ಧ್ವನಿಯನ್ನು ಪಕ್ಷ ಕೇಳುತ್ತಿಲ್ಲ ಎಂಬ ಭಾವನೆ ಬೆಳೆಸಿಕೊಂಡಿದ್ದರು. ಆದರೆ ಕೇಜ್ರಿವಾಲ್ ಈ ಸಂಘಟನೆಯ ನಾಶಕ್ಕೆ ಹೊರಟರು. ಅವರಿಂದ ದಂಗೆ ಉಂಟಾಗುತ್ತದೆ ಎಂದು ಭಾವಿಸಿದರು. ಆದ್ದರಿಂದ ಅವರ ಹೆಸರಿನಲ್ಲಿ, ಎಲ್ಲ ಸ್ವಯಂಸೇವಕರು ಬಿಜೆಪಿಗೆ ಸೇರಲು ಕರೆ ನೀಡುವ ನಕಲಿ ಎಸ್ಸೆಮ್ಮೆಸ್ ಕಳುಹಿಸಿದರು. ಬಳಿಕ ಸ್ವಯಂಸೇವಕರು ಬಿಜೆಪಿ ಏಜೆಂಟ್‌ಗಳು ಎಂದು ಆರೋಪಿಸಲು ನಕಲಿ ಎಸ್ಸೆಮ್ಮೆಸ್ ಬಳಸಿದರು.

    ನೀವೆಲ್ಲರೂ ‘‘ಇಂಡಿಯಾ ಅಗನೆಸ್ಟ್ ಕರಪ್ಷನ್’’ ಚಳವಳಿಯ ಪ್ರಮುಖ ಸದಸ್ಯರಾಗಿದ್ದಾಗ, ನಡೆದ ಘಟನಾವಳಿ ಬಗ್ಗೆ ನಿಮಗೆ ವಿಷಾದ ಇದೆಯೇ?
    -ಹೌದು. ಅಂಥ ವಿಷಾದದ ಛಾಯೆ ದಟ್ಟವಾಗಿದೆ. ಇದಕ್ಕೆ ಅಭೂತಪೂರ್ವ ಶಕ್ತಿ ಇತ್ತು. ದುರದೃಷ್ಟವಶಾತ್, ಅದೆಲ್ಲವೂ ಮಣ್ಣುಪಾಲಾಯಿತು. ನಾವೆಲ್ಲರೂ ಇತರ ಯಾವುದೇ ಒಂದು ಪಕ್ಷದಂತೆ ಮತ್ತೊಂದು ಪಕ್ಷದಲ್ಲಿ ಉಳಿದೆವು.

    ಆಮ್ ಆದ್ಮಿ ಪಕ್ಷ ಯಾವುದೇ ಚುನಾವಣಾ ಆಶ್ವಾಸನೆಗೆ ಬದ್ಧವಾಗಿಲ್ಲವೇ? ಉಚಿತ ನೀರು, ವಿದ್ಯುತ್, ಶಾಲೆ?
    -ಕೆಲವನ್ನು ಮಾಡುತ್ತಿದೆ. ಆದರೆ ಪಕ್ಷವನ್ನು ಕಟ್ಟಿದ ಮುಖ್ಯ ಉದ್ದೇಶ ಭ್ರಷ್ಟಾಚಾರ ವಿರುದ್ಧ ಹೋರಾಟ, ಪಾರದರ್ಶಕತೆ ಮತ್ತು ಹೊಣೆಗಾರಿಕೆ. ಆದರೆ ಈಗ ಪಾರದರ್ಶಕತೆ ಶೂನ್ಯ, ಹೊಣೆಗಾರಿಕೆ ಶೂನ್ಯ ಹಾಗೂ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಿಲ್ಲಿ ಸರಕಾರ ಪಾರದರ್ಶಕವಾಗಿದ್ದರೆ ಏಕೆ ಕಡತಗಳನ್ನು ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ? ಕೇಜ್ರಿವಾಲ್ ಅವರ ಯೋಚನೆ, ಸಾಕಷ್ಟು ಮಾಡಿದ್ದೇನೆ ಎಂದು ಬಿಂಬಿಸುವುಷ್ಟೇ. ಮೊಹಲ್ಲಾ ಕ್ಲಿನಿಕ್‌ಗಳನ್ನು ತೆಗೆದುಕೊಳ್ಳಿ. ಒಪ್ಪಂದ ಇರುವುದು ವೈದ್ಯರು ರೋಗಿಗಳ ತಪಾಸಣೆಗೆ 30 ರೂಪಾಯಿ ತೆಗೆದುಕೊಳ್ಳಬೇಕು ಎಂದು. ಆದರೆ ಈಗಷ್ಟೇ ಎಂಬಿಬಿಎಸ್ ಮುಗಿಸಿದ ಕೆಲ ನಿರುಪಯುಕ್ತ ವೈದ್ಯರನ್ನು ಹಿಡಿದು, ಇವರಿಂದ ದೊಡ್ಡ ಸಂಖ್ಯೆಯ ರೋಗಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಸರಕಾರದಲ್ಲಿ ತೋರಿಸಲು ರೋಗಿಗಳ ಪಟ್ಟಿ ಇದೆ. ಮುಂದಿನ ತಪಾಸಣೆಗೆ ಈ ಕ್ಲಿನಿಕ್‌ಗಳು ಖಾಸಗಿ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಇಲ್ಲಿ ರಕ್ತಪರೀಕ್ಷೆಗೂ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಸಹಜವಾಗಿಯೇ ಅನಗತ್ಯ ರಕ್ತ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿ ಏಜೆನ್ಸಿಗಳು ದೊಡ್ಡ ಮಟ್ಟದ ಕಮಿಷನ್ ದಂಧೆ ನಡೆಸುತ್ತಿವೆ.
    ನಾನು ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸಿಲ್ಲ. ಆದರೆ ಖ್ಯಾತ ಶಿಕ್ಷಣ ತಜ್ಞ ಹಾಗೂ ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕ ಪ್ರೊ. ಕೃಷ್ಣಕುಮಾರ್, ದಿಲ್ಲಿ ಸರಕಾರದ ಬಗ್ಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಆಪ್ ಅವಿವೇಕಿ ಕೆಲಸ ಮಾಡುತ್ತಿದೆ ಎಂದು ದೂಷಿಸಿದ್ದಾರೆ. ಶಾಲೆಯ ಪ್ರಾಚಾರ್ಯರನ್ನು ಶಿಕ್ಷಣ ಪಡೆಯಲು ಕೇಂಬ್ರಿಡ್ಜ್‌ಗೆ ಕಳುಹಿಸುವುದು ಅಥವಾ ಪಠ್ಯಪುಸ್ತಕಗಳನ್ನು ಶೇ.20ರಷ್ಟು ಕಡಿತಗೊಳಿಸುವುದರಿಂದ ಯಾವ ಪ್ರಯೋಜನವೂ ಆಗದು. ಸರಕಾರಿ ಶಾಲೆಗಳನ್ನು ನೋಡಿಕೊಳ್ಳಲು ಒಳ್ಳೆಯ ಶಿಕ್ಷಣ ತಜ್ಞರು ಬೇಕು.

    ಲೋಕಪಾಲ್ ಜಾರಿಗೆ ಬರಲೇ ಇಲ್ಲ ಎಂಬ ಬಗ್ಗೆ ನಿರಾಸೆಯಾಗಿದೆಯೇ?
    -ಸಾಕಷ್ಟು ಒತ್ತಡ ಹೇರಿದ ಬಳಿಕ ಕೇಜ್ರಿವಾಲ್ ಒಂಬತ್ತು ತಿಂಗಳ ಬಳಿಕ ತರಾತುರಿಯಲ್ಲಿ ಮಸೂದೆ ರೂಪಿಸಿದರು. ಇದು ಮೂಲ ಮಸೂದೆಗಿಂತ ಸಂಪೂರ್ಣ ಭಿನ್ನ ಮಾತ್ರವಲ್ಲದೇ, ಕುಚೋದ್ಯದ ಸೆಕ್ಷನ್ ಒಂದನ್ನು ಕೂಡ ಇದರಲ್ಲಿ ಅಳವಡಿಸಿದ್ದಾರೆ. ಅದೆಂದರೆ ದಿಲ್ಲಿ ಲೋಕಪಾಲ, ಕೇಂದ್ರ ಸಚಿವರನ್ನು ಕೂಡಾ ತನಿಖೆ ನಡೆಸಬಹುದು ಎನ್ನುವುದು. ಸಹಜವಾಗಿಯೇ ಕೇಂದ್ರ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಅದು ಕಾನೂನು ಆಗಬೇಕಾದರೆ ಕೇಂದ್ರದ ಸಮ್ಮತಿ ಬೇಕು. ಲೋಕಪಾಲ ಇಲ್ಲದೆಯೇ ಅವರು ಸಂತೋಷವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಇದು ಇಲ್ಲದಿರುವುದರಿಂದ ಸಂತೋಷದಿಂದಿದ್ದಾರೆ.

ಮೋದಿ ಸರಕಾರಕ್ಕೆ ಅವರ ಸವಾಲನ್ನು ನೀವು ಮಾನ್ಯ ಮಾಡುತ್ತೀರಾ?
    -ಖಂಡಿತವಾಗಿಯೂ. ಮೋದಿ ಸರಕಾರವನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿದ್ದಾರೆ. ಅದನ್ನು ಮಾನ್ಯ ಮಾಡಲೇಬೇಕು.
    ಮುಂದೆ ನಿಮ್ಮ ನಡೆ ಏನು? ಯಾವುದೇ ರಾಜಕೀಯ ಯೋಚನೆ ಇದೆಯೇ?
    -ದೇಶದ ಎಲ್ಲೆಡೆ ಜನ ಕೆಲ ಪ್ರಾಮಾಣಿಕ, ವಿಶ್ವಾಸಾರ್ಹ ಪರ್ಯಾಯಕ್ಕೆ ಎದುರು ನೋಡುತ್ತಿದ್ದಾರೆ. ಆದರೆ ಇದುವರೆಗೂ ಅಂತಹದ್ದು ಸಿಕ್ಕಿಲ್ಲ. ಇದು ಕಷ್ಟದ ಕೆಲಸ ಕೂಡಾ. ಏಕೆಂದರೆ, ಜನ ಆರಂಭದಲ್ಲಿ ನಿಮ್ಮನ್ನು ವಿಶ್ವಾಸಾರ್ಹ ವ್ಯಕ್ತಿ ಎಂದು ನಿರೂಪಿಸಿಕೊಳ್ಳಬೇಕಿದ್ದರೆ, ಈ ಅಧಿಕಾರದ ಆಟದಲ್ಲಿ, ನೀವು ಹಾಗೆ ಬಿಂಬಿಸಿಕೊಳ್ಳಬೇಕು. ಇದಕ್ಕೆ ದೊಡ್ಡ ಮೊತ್ತದ ಹಣ, ಪ್ರಚಾರ ಬೇಕು. ಆಪ್‌ಗೆ ಇದು ಸಾಧ್ಯವಾಯಿತು. ಭ್ರಷ್ಟಾಚಾರ ವಿರೋಧಿ ಚಳವಳಿಗೆ ಸಾಕಷ್ಟು ಪ್ರಚಾರ ಸಿಕ್ಕಿತು.
 ಸದ್ಯಕ್ಕೆ ಮುಂದಿರುವ ಚಿಂತನೆ ಎಂದರೆ, ಅಂಥ ಚಳವಳಿ ಅಥವಾ ಸಂಘಟನೆಗಳ ಜತೆ ಕೈಜೋಡಿಸುವುದು. ವಿಸ್ತೃತವಾಗಿ ಸಮಾನ ಸಿದ್ಧಾ�

share
ವಾರ್ತಾಭಾರತಿ
ವಾರ್ತಾಭಾರತಿ
Next Story
X