ಇದು ಸಾವಿನ ಸೋಲು... ಸಾವಿರ ಹೃದಯಗಳಲ್ಲಿ ಶಾಹಿದ್ ಇನ್ನೂ ಜೀವಂತ
ಸಂಬಂಧದ ಬೆಲೆ ಎಷ್ಟು ಗೊತ್ತೇ? ಒಲಿಂಪಿಕ್ಸ್ ಹಾಕಿ ಚಿನ್ನದ ಪದಕದಷ್ಟು!

ಬನಾರಸ್ ಘಾಟ್‌ಗಳು ಕೂಡಾ ಮುಹಮ್ಮದ್ ಶಾಹಿದ್ ಜತೆ ಸಂವಾದ ನಡೆಸುತ್ತಿವೆ. ನೀವು ಜೀವನವಿಡೀ ನಮ್ಮನ್ನು ಸ್ವಂತ ಮಕ್ಕಳಂತೆ ಕಂಡಿದ್ದೀರಿ. ಆದರೆ ಬೀಳ್ಕೊಡುಗೆ ಸಮಯ ಬಂದಾಗ, ನಮ್ಮಿಂದ ಬಹಳ ದೂರ ಉಳಿದಿರಿ ಅಬ್ಬಾ! ಈ ಮಹಾನ್ ವ್ಯಕ್ತಿಯ ಸಾಮೀಪ್ಯವೇ ಅಷ್ಟು ಅಪ್ಯಾಯಮಾನ.
ದೇಶದ ಮಹಾನ್ ಹಾಕಿ ಮಾಂತ್ರಿಕ ಹಾಗೂ ಅವರ ಹುಟ್ಟೂರಿಗೆ ಇದ್ದ ಭಾವನಾತ್ಮಕ ಬಂಧ ಅದು. ಬನಾರಸ್‌ಗೆ ಈಗ ವಾರಣಾಸಿ ಎಂಬ ಹೆಸರು. ಆದರೆ ಶಾಹಿದ್‌ಗೆ ಅದು ಎಂದೂ ಸುಂದರ ಬನಾರಸ್. ಅಗರ್ ಮೈನ್ ಬನರಾಸಿ ನ ಹೋತಾ, ತೊಹ್ ಮುಹಮ್ಮದ್ ಶಾಹಿದ್‌ನ ಹೋತಾ (ನಾನು ಬನಾರಸಿ ಆಗಿರದಿದ್ದರೆ, ನಾನು ಮುಹಮ್ಮದ್ ಶಾಹಿದ್ ಕೂಡಾ ಆಗಿರುತ್ತಿರಲಿಲ್ಲ) ಸಾವಿಗೆ ಕೆಲವೇ ದಿನ ಮುನ್ನ ಅವರ ಅಣಿಮುತ್ತುಗಳು ಇವು.
56ನೆ ವಯಸ್ಸಿನಲ್ಲೇ ಸಾವು ಖಂಡಿತ ಅನ್ಯಾಯ; ಆದರೆ ಅದು ಕುಟುಂಬ ಹಾಗೂ ಸ್ನೇಹಿತರಿಗೆ. ಆದರೆ ಮೇಲೆ ಇರುವ ಸುಪ್ರೀಂ ಅಂಪೈರ್ ಆಟ ನಿಲ್ಲಿಸಲು ಹೇಳಿ ಆಟಗಾರನನ್ನು ಹೊರಗೆ ಕಳುಹಿಸಲು ಯಾವ ಉಲ್ಲೇಖವೂ ಬೇಕಿಲ್ಲ. ಯಾವುದೇ ತಡೆಯನ್ನಾದರೂ ದೂಡಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದ್ದ ಈ ಮಹಾನ್ ಹಾಕಿ ಮಾಂತ್ರಿಕ ಲಿವರ್ ಸಮಸ್ಯೆಗೆ ಸೋಲಬೇಕಾಯಿತು. ಆದರೆ ಅಲ್ಲೂ ಹೋರಾಟದ ಛಲ ಬಿಡಲಿಲ್ಲ. ಶಾಹಿದ್ ಮನಸ್ಸು ಗಟ್ಟಿ ಮಾಡಿಕೊಂಡಿದ್ದರು. ಈ ಮಹಾನ್ ಚೇತನದ ಜೀವ ಉಳಿಸಲು ಶ್ರಮ ವಹಿಸಿದ ಮೇದಾಂತ ಆಸ್ಪತ್ರೆ ವೈದ್ಯರಂತೆ, ಕುಟುಂಬ ಸದಸ್ಯರಿಗೆ ಶಾಹಿದ್ ಹೇಳುತ್ತಿದ್ದುದು, ಆತಂಕಪಡುವಂತ ಹದ್ದೇನೂ ಇಲ್ಲ. ಕೊನೆಗೂ ಕುಟುಂಬದ ನೆರವಿಗೆ ನಿಂತದ್ದು ಅವರ ಉದ್ಯೋಗದಾತ ರೈಲ್ವೇಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಕ್ರೀಡಾ ಸಚಿವಾಲಯ. ಶಾಹಿದ್ ಬಾಯ್ ಜತೆಗೆ ಸಂಬಂಧ ಕಲ್ಪಿಸಿಕೊಳ್ಳುವುದು ಬಹುಶಃ 21ನೆ ಶತಮಾನದ ಪೀಳಿಗೆಗೆ ಕಷ್ಟ. ನಮ್ಮ ದೇಶ ಕಳೆದುಕೊಂಡ ದಂತಕಥೆಯಂತಿದ್ದ ವ್ಯಕ್ತಿ ಯಾರು ಎಂದು ಪ್ರಶ್ನಿಸಿದರೂ ಅಚ್ಚರಿ ಇಲ್ಲ. ಇಂಥ ಭಾವನಾತ್ಮಕ ಮಿಡಿತ ಏಕೆ? ಅವರು ಬಿಟ್ಟುಹೋದ ಪರಂಪರೆಯಾದರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಈ ಪೀಳಿಗೆಯವರಲ್ಲಿ ಉದ್ಭವಿಸಬಹುದು.
ಶಾಹಿದ್ ಪರಂಪರೆ
ಮುಹಮ್ಮದ್ ಶಾಹಿದ್ ದೇಶದ ಸರ್ವಶ್ರೇಷ್ಠ ಹಾಕಿ ಆಟಗಾರರ ಪೈಕಿ ಒಬ್ಬರಷ್ಟೇ ಅಲ್ಲ; ನಾನು 1980ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಗಳಿಸಿದ ಚಿನ್ನದ ಪದಕದಷ್ಟೇ ಬೆಲೆ ಮಾನವೀಯ ಸಂಬಂಧಗಳಿಗೂ ಇದೆ ಎಂದು ನಿರೂಪಿಸಿದ ಅಪರೂಪದ ಚೇತನ. ಒಲಿಂಪಿಕ್ ಪೋಡಿಯಂನಲ್ಲಿ ಭಾರತ ಹಾಕಿ ತಂಡ ಕಾಣಿಸಿಕೊಂಡದ್ದು ಅದೇ ಕೊನೆ. ಜಾಫರ್ ಇಕ್ಬಾಲ್ ಅವರನ್ನು ಕೇಳಿದರೆ, ಶಾಹಿದ್ ತಮ್ಮ ಹೃದಯಕ್ಕೆ ಹತ್ತಿರವಿದ್ದವರ ಕಲ್ಯಾಣಕ್ಕೆ ಹೇಗೆ ಸ್ಪಂದಿಸುತ್ತಿದ್ದರು ಎಂದು ಹೇಳುತ್ತಾರೆ. ಭಾರತೀಯ ಹಾಕಿ ತಂಡದ ಇಕ್ಬಾಲ್- ಶಾಹಿದ್, ವಿಶ್ವದ ಸರ್ವಶ್ರೇಷ್ಠ ರಕ್ಷಣಾ ಆಟಗಾರರನ್ನೂ ಗಲಿಬಿಲಿಗೊಳಿಸಿದ ಅಪರೂಪದ ಜೋಡಿ. ಕಳೆದ ಮಂಗಳವಾರ ಕೊನೆಯುಸಿರೆಳೆದ ಶಾಹಿದ್ ಅವರಿಗೆ ಗೌರವ ಸಮರ್ಪಿಸುವ ಹಲವು ಭಾಷ್ಪಾಂಜಲಿಗಳಲ್ಲಿ ಜೀವದ ಜೋಡಿ ಎಂದು ಬಣ್ಣಿಸಲಾಗಿದೆ. ತಮ್ಮ ತೀರಾ ಆತ್ಮೀಯರನ್ನು ಶಾಹಿದ್ ಸಂಬೋಧಿಸುತ್ತಿದ್ದುದು ಹಾಗೆ.
ಇಷ್ಟಾಗಿಯೂ ಶಾಹಿದ್ ರಕ್ಷಣೆ ಕ್ಷೇತ್ರದಲ್ಲಿ ಅಂಥ ಅದ್ಭುತ ಆಟಗಾರರೇನೂ ಅಲ್ಲ. ಬಹುಶಃ ಇದೇ ಕಾರಣದಿಂದ ಈ ಬಾರಿ ಆಕ್ರಮಣಕಾರಿ ಆಟಗಾರನ ಮೇಲಿನ ದಾಳಿಗೆ ಆತ ಸೋಲಬೇಕಾಯಿತು. ಜಾಂಡೀಸ್, ಲಿವರ್ ಸಂಕೀರ್ಣತೆಗೆ ತಿರುಗಿ ಮಾರಣಾಂತಿಕವಾಯಿತು.
ಆದರೆ ಅರ್ಜುನ ಪ್ರಶಸ್ತಿ ವಿಜೇತ ಶಾಹಿದ್ ಎಂದೂ ಸ್ವಯಂ ರಕ್ಷಣೆ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ.
ಮೈದಾನದ ಹೊರಗಿನ ಅವರ ಬೆರಗುಗೊಳಿಸುವಂತಹ ನಯ-ವಿನಯ ಅವರಿಗೆ ಅದನ್ನು ಮೀರಿದ ಗೌರವ ತಂದುಕೊಟ್ಟಿತು. ಅವರ ದೇಹಸ್ಥಿತಿ ವಿಷಮಿಸಿದಾಗ ಅವರ ವೃತ್ತಿಬದುಕಿನ ಈ ಎರಡು ಗಳಿಕೆಗಳೇ, ಇಡೀ ಹಾಕಿ ಜಗತ್ತು ಅವರ ಹಿಂದೆ ಬೆಂಗಾವಲಾಗಿ ನಿಲ್ಲುವಂತೆ ಮಾಡಿದ್ದು.
ಅವರ ಪತ್ನಿ ಹಾಗೂ ಅವಳಿ ಮಕ್ಕಳು, ಸಾವಿನ ಹಿಂದಿನ ದಿನ ಯಾವ ಸ್ಪಂದನೆಯೂ ಇಲ್ಲದೇ ಶಾಹಿದ್ ಕುಸಿದದ್ದನ್ನು ಕಂಡಿದ್ದರು. ಬಹುಶಃ ಆಟ ನಿಲ್ಲಿಸಿದ ಸೀಟಿಯ ಸದ್ದು ಅವರಿಗೆ ಕೇಳಿಸಿರಬೇಕು. ಹಾಕಿಯ ಆ ಮಂತ್ರದಂಡ ನಿಶ್ಚಲವಾಗಿದೆ. ಲಯ ನಿಂತಿದೆ. ಬನಾರಸ್ ಘಾಟ್‌ನ ಮೈಲಿಯಾಚೆಗೂ, ಪ್ರೀತಿಪಾತ್ರನಿಗಾಗಿ ಭಾರತದ ಹೆಮ್ಮೆಯ ಪುತ್ರನಿಗಾಗಿ ಕಾಯುತ್ತಲೇ ಇದೆ.







