2 ಸಾವಿರ ವರ್ಷ ಪುರಾತನ ಸಂಗೀತ ಉಪಕರಣ ಪತ್ತೆ ಹಚ್ಚಿದ ರೈತ
ಬೀಜಿಂಗ್,ಜು.24: ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಸಂಗೀತ ಉಪಕರಣವೊಂದನ್ನು ಪತ್ತೆಹಚ್ಚಿದ 47 ವರ್ಷ ವಯಸ್ಸಿನ ಚೀನಿ ರೈತನೊಬ್ಬನಿಗೆ 3330 ಅಮೆರಿಕನ್ ಡಾಲರ್ ಬಹುಮಾನವನ್ನು ನೀಡಲಾಗಿದೆ. ಪುರಾತನ ಸಾಂಸ್ಕೃತಿಕ ಕೃತಿಯೊಂದನ್ನು ಸ್ವಯಂಪ್ರೇರಿತವಾಗಿ ಹಸ್ತಾಂತರಿಸಿದ್ದಕ್ಕಾಗಿ, ನೀಡಲಾದ ಅತಿ ದೊಡ್ಡ ಮೊತ್ತದ ಬಹುಮಾನ ಇದೆನ್ನಲಾಗಿದೆ.
30 ಸೆಂ.ಮೀ. ವಿಸ್ತೀರ್ಣದ ಹಾಗೂ 1 ಕಿ.ಗ್ರಾಂ. ಭಾರದ ಈ ಉಪಕರಣವನ್ನು ಚೀನಾದ ಹುನಾನ್ ಪ್ರಾಂತ್ಯದ ನಿವಾಸಿ ಝಾಂಗ್ ಝಿಲಿನ್ ಪತ್ತೆಹಚ್ಚಿದ್ದಾನೆ. ಹಾರೆಯ ಆಕಾರವನ್ನು ಹೊಂದಿದ್ದು, ಚುಕ್ಕೆಗಳಿಂದ ಹಾಗೂ ಹೆಣಿಗೆಯ ಮಾದರಿಗಳಿಂದ ಆಲಂಕೃತವಾಗಿದೆ. ಕಂಚಿನಿಂದ ನಿರ್ಮಿಸಲ್ಪಟ್ಟ ಈ ಸಾಧನವು, ಪುರಾತನ ಚೀನಿ ಡ್ರಮ್‌ನ ಒಂದು ಭಾಗವಾಗಿರಬೇಕೆಂದು ಕ್ಸಿಯಾಂಕ್ಸಿ ಪುರಾತತ್ವ ಮ್ಯೂಸಿಯಂನ ವರಿಷ್ಠ ಝಾಂಗ್ ಫೆಂಗ್ ತಿಳಿಸಿದ್ದಾರೆ.
ಈ ಡ್ರಮ್‌ನ್ನು ಮರದ ಕೋಲಿನಿಂದ ಬಡಿದಾಗ, ಅದರಲ್ಲಿ ಜೋಡಿಸಲಾದ ವಿಭಿನ್ನ ಗಾತ್ರದ ಗಂಟೆಗಳು, ವಿವಿಧ ರೀತಿಯ ಶಬ್ದಗಳನ್ನು ಹೊರಡಿಸುತ್ತವೆ.
Next Story





