ತುಳು ಸಿನೆಮಾ ನಕಲಿ ಸಿಡಿ: ದೂರು
ಕಾರ್ಕಳ, ಜು.24: ಬಿಡುಗಡೆಗೆ ಮೊದಲೇ ತುಳು ಸಿನೆಮಾವನ್ನು ನಕಲಿ ಮಾಡಿ ಮೊಬೈಲ್‌ಗಳಿಗೆ ಅಪ್‌ಲೋಡ್ ಮಾಡುತ್ತಿರುವ ಮೊಬೈಲ್ ಅಂಗಡಿ ಮಾಲಕನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.5ರಂದು ಬಿಡುಗಡೆಗೆ ನಿಗದಿಯಾಗಿರುವ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ನಿರ್ಮಾಣದ ‘ದಬಕ್ ದಬಾ ಐಸಾ’ ತುಳು ಚಲನಚಿತ್ರವನ್ನು ಕರ್ನಾಟಕ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರು/ಪದಾಧಿಕಾರಿಗಳು, ಸೆನ್ಸಾರ್ ಮಧ್ಯವರ್ತಿ ಕುಮಾರ್, ಬೆಂಗಳೂರು ಚಿಕ್ಕಲಸಂಧ್ರ ಅಬ್ಬಯ್ಯ ನಾಯ್ಡು ಸ್ಟುಡಿಯೋ ಮುಖ್ಯಸ್ಥ ಮತ್ತು ಕಾರ್ಕಳ ಕುಂಟಲ್ಪಾಡಿಯ ಶಶಿಕಾಂತ್ ಎಂಬವರು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ನಕಲಿ ಮಾಡಿದ್ದಾರೆ.ಕಾರ್ಕಳದಲ್ಲಿರುವ ಶಶಿಕಾಂತ ಕುಂಟಲ್ಪಾಡಿ ಎಂಬಾತನ ಮೊಬೈಲ್ ಅಂಗಡಿಯಲ್ಲಿ ಜು.20ರಂದು ಗ್ರಾಹಕರಿಂದ ತಲಾ 20ರೂ. ಪಡೆದು ಮೊಬೈಲ್‌ಗಳಿಗೆ ಹಾಕಿಕೊಟ್ಟು ನಿರ್ಮಾಪಕರಿಗೆ ಆರ್ಥಿಕ ನಷ್ಟವನ್ನುಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





