ಸಾರಿಗೆ ನೌಕರರ ಮುಷ್ಕರ : ನಮ್ಮ ಮೆಟ್ರೋವನ್ನು ಅವಲಂಭಿಸಿದ ಪ್ರಯಾಣಿಕರು
ಬೆಂಗಳೂರು, ಜು.25: ರಾಜ್ಯದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಪ್ರತಿದಿನ ಬೆಳಗ್ಗೆ 13 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇಂದು ಪ್ರಯಾಣಿಕರ ಸಂಖ್ಯೆ 18 ಸಾವಿರಕ್ಕೆ ಏರಿದೆ.ಬೆಳಗ್ಗೆ 6 ಗಂಟೆಯಿಂದ 9 ಗಂಟೆ ನಡುವೆ ಸುಮಾರು 18 ಸಾವಿರ ಜನರು ಪ್ರಯಾಣಿಸಿದ್ದಾರೆ.
*ಸಾರಿಗೆ ನೌಕರರ ಮುಷ್ಕರ : 120 ಸರಕಾರಿ ಬಸ್ ಗಳಿಗೆ ಹಾನಿ
*ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ರೈಲ್ ಗಳಿಗೆ ಹೆಚ್ಚುವರಿ ನಿಲುಗಡೆ ವ್ಯವಸ್ಥೆ .
* ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸುತ್ತಿದೆ.
*15 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ .
Next Story