ರಾಜ್ಯ ಸಾರಿಗೆ ನೌಕರರ ವೇತನ ಶೇ. 12.5ರಷ್ಟು ಹೆಚ್ಚಳ ಪ್ರಸ್ತಾಪ

ಬೆಂಗಳೂರು, ಜು.25: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಕರೆಯಲಾದ ಸಮಾಲೋಚನಾ ಸಭೆಯಲ್ಲಿ ರಾಜ್ಯ ಸಾರಿಗೆ ನೌಕರರ ವೇತನವನ್ನು ಶೇ 12.5ರಷ್ಟು ಏರಿಸುವ ಪ್ರಸ್ತಾಪವನ್ನು ಸಾರಿಗೆ ಅಧಿಕಾರಿಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ.
ಮುಖ್ಯ ಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಅಧಿಕಾರಿಗಳು ಮುಷ್ಕರದಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ವರದಿ ಒಪ್ಪಿಸಿದ್ದಾರೆ. ಇದೇ ವೇಳೆ ಸಾರಿಗೆ ಅಧಿಕಾರಿಗಳು ವೇತನ ಹೆಚ್ಚಳದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ಒಂದು ವೇಳೆ 12.5ರಷ್ಟು ವೇತನ ಹೆಚ್ಚಳ ಪ್ರಸ್ತಾವನೆಯನ್ನು ಒಪ್ಪಿದರೆ ಸರಕಾರದ ಬೊಕ್ಕಸಕ್ಕೆ 541 ಕೋಟಿ ರೂ. ಹೊರೆ ಬೀಳಲಿದೆ. ಸರಕಾರ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Next Story





