ನನ್ನ ಮಗ ತಪ್ಪು ಮಾಡಿದ್ದರೆ ಕ್ರಮ ಆಗಲಿ: ಸಚಿವ ರೈ

ಮಂಗಳೂರು, ಜು.25: ನನ್ನ ಮಗನಿಂದ ತಪ್ಪು ನಡೆದಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಚಿವ ರಮಾನಾಥ್ ರೈ ಹೇಳಿದ್ದಾರೆ.
ತನ್ನ ಪುತ್ರನ ಕುರಿತು ಕೊಡಗು ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೈ, ನನ್ನ ಮಗ ಅಥವಾ ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಸೂಕ್ತ ಕ್ರಮವಾಗಲಿ. ಅದಕ್ಕಾಗಿ ನಾನು ಯಾರ ಮೇಲೂ ಒತ್ತಡ ತರುವುದಿಲ್ಲ. ಈ ಹಿಂದೊಬ್ಬರು ಮಗನ ಹೆಸರು ಹೇಳಿ ವರ್ಗಾವಣೆಗೆ ನನ್ನ ಬಳಿಗೆ ಬಂದಿದ್ದಾಗ, ಅವರಿಗೆ ತಕ್ಕ ಉತ್ತರ ನೀಡಿ ಕಳುಹಿಸಿದ್ದೆ ಎಂದರು.
ಮಕ್ಕಳು ಹೊರಗೆ ಕೆಲವೊಮ್ಮೆ ತಪ್ಪು ಮಾಡಿದಾಗ ಅದಕ್ಕೆಲ್ಲದ್ದಕ್ಕೂ ನಾವು ಉತ್ತರ ಕೊಡಲಾಗುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ಅದಕ್ಕೆ ಕ್ರಮ ಆಗಬೇಕು ಎಂದು ಅವರು ಹೇಳಿದರು.
Next Story





