ಕೃಷ್ಣಮೃಗವೇ ಕಾರು ಬಿಡುತ್ತಿತ್ತು!
ಸಲ್ಮಾನ್ ದೋಷಮುಕ್ತಿಗೆ ಕುಟುಕಿದ ಟ್ವಿಟ್ಟರ್ ಪ್ರತಿಕ್ರಿಯೆಗಳು

ಜೈಪುರ್, ಜು.25:ಕೃಷ್ಣಮೃಗ ಮತ್ತು ಚಿಂಕಾರ ಬೇಟೆಯಾಡಿದ ಆರೋಪ ಹೊತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸೋಮವಾರ ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದೆ. 1998ರಲ್ಲಿ ನಡೆದಿದೆಯೆನ್ನಲಾದ ಈ ಎರಡೂ ಪ್ರಕರಣಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಕೋರ್ಟ್ ದೋಷಮುಕ್ತಿಗೊಳಿಸಿದೆ.
ಕೆಳಗಿನ ಹಂತದ ನ್ಯಾಯಾಲಯವೊಂದು ಸಲ್ಮಾನ್ ಅವರಿಗೆ ಕೃಷ್ಣಮೃಗ ಬೇಟೆ ಹಾಗೂ ಚಿಂಕಾರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮವಾಗಿ ಒಂದು ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ಘೋಷಿಸಿರುವುದನ್ನು ಪ್ರಶ್ನಿಸಿ ಸಲ್ಮಾನ್ ಹೈಕೋರ್ಟಿಗೆ ಮೊರೆ ಹೋಗಿದ್ದರು. ಸೂರಜ್ ಭಾರ್ಜಾತ್ಯರ ಚಿತ್ರ ‘ಹಮ್ ಸಾಥ್ ಸಾಥ್ ಹೇ’ ಶೂಟಿಂಗಿಗಾಗಿ ಆಗಮಿಸಿದ್ದ ಸಮಯದಲ್ಲಿ ಸಲ್ಮಾನ್ ಹಾಗೂ ಇತರ ಏಳು ಸಹನಟರು ಬೇಟೆಯಾಡಿದ್ದರೆಂದು ಆರೋಪಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ತನ್ನ ಮೇಲೆ ಅನಗತ್ಯವಾಗಿ ಆರೋಪ ಹೊರಿಸಿದೆಯೆಂದು ಸಲ್ಮಾನ್ ವಾದಿಸಿದ್ದರು.
ಸಲ್ಮಾನ್ ಅವರ ದೋಷಮುಕ್ತಿಗೆ ಟ್ವಿಟ್ಟರಿಗರು ತಮ್ಮ ಟ್ವೀಟ್‌ಗಳಿಂದ ಅವರನ್ನು ಕುಟುಕಿದ್ದಾರೆ. ಒಬ್ಬರಂತೂ ಕೃಷ್ಣ ಮೃಗವೇ ಕಾರು ಬಿಡುತ್ತಿತ್ತು, ಎಂದು ಅಪಹಾಸ್ಯ ಮಾಡಿದ್ದಾರೆ, ಇನ್ನೊಬ್ಬರು ‘ಚಿಂಕಾರವನ್ನು ಯಾರೂ ಕೊಂದಿಲ್ಲ, ಅದು ಆತ್ಮಹತ್ಯೆ ಮಾಡಿಕೊಂಡಿತ್ತು,’’ ಎಂದಿದ್ದಾರೆ. ‘‘ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಿಲ್ಲ. ಅವರ ಸಿನಿಮಾಗಳಿಲ್ಲದ ಉತ್ತಮ ಜಾಗಕ್ಕೆ ಅವುಗಳನ್ನು ಕಳುಹಿಸಿದ್ದಾರೆ,’’ ಎಂದು ಇನ್ನೊಂದು ಟ್ವೀಟ್ ಹೇಳಿದೆ.
ಟ್ವಿಟ್ಟರಿನ ಅಷ್ಟೆಲ್ಲಾ ಪ್ರತಿಕ್ರಿಯೆಗಳಿಗೂ ನಟ ಮೌನ ವಹಿಸಿದ್ದಾರೆ. ‘ಸುಲ್ತಾನ್ ಚಿತ್ರದ ಶೂಟಿಂಗ್ ಮುಗಿಸಿ ಬರುವಾಗ ರೇಪ್ ಮಾಡಲ್ಪಟ್ಟ ಮಹಿಳೆಯ ಸ್ಥಿತಿ ತನ್ನದಾಗುತ್ತಿತ್ತು’ ಎಂಬ ಅವರ ಇತ್ತೀಚಿಗಿನ ಅವರ ಹೇಳಿಕೆ ವಿಚಾರದಲ್ಲೂ ಟ್ವಿಟ್ಟರ್ ಪ್ರತಿಕ್ರಿಯೆಗೆ ಸಲ್ಮಾನ್ ಮೌನ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Bhai out for a walk #SalmanKhanRulesInternet pic.twitter.com/8ccG0mhbr2
— MedievalReactionsIN (@MedievalRxnsIN) April 21, 2015
Awaiting case against deceased black buck for stress and mental trauma caused to the innocent.
— Shilpa Rathnam (@shilparathnam) July 25, 2016
No one killed chinkara
— Niraj (@niraj_abhi) July 25, 2016
It was actually suicide
Jai ho salman Khan
Of course Salman Khan didn’t kill any blackbuck. All blackbucks have long been safely deposited in Swiss banks.
— Anuradha (@anuradha_kush) July 25, 2016
Salman Khan didn't kill the black buck, he sent it to a better place which doesn't have his movies.
— Pakchikpak Raja Babu (@HaramiParindey) July 25, 2016
Salman Khan didn't kill those deer, obviously. They dropped dead of their own accord to avoid watching his latest film.
— lindsay pereira (@lindsaypereira) July 25, 2016
Salman Khan acquitted in poaching case after 18 years.
— Ramesh Srivats (@rameshsrivats) July 25, 2016
Probably because all the victim's friends and relatives have already died of old age.
Exclusive picture of evidence submitted by Salman Khan's lawyer. pic.twitter.com/wWF6yR8Fuz
— Sagar (@sagarcasm) July 25, 2016
#SalmanKhan has finally been acquitted in the 1998 poaching cases. All thanks to the big bucks.
— Sayantan Ghosh (@sayantansunnyg) July 25, 2016
All the benefit of doubts Salman Khan gets leads us to the only conclusion that #SalmanKhan 's existence itself is doubtful
— Krupakar M (@krupakar_m) July 25, 2016
The liberal elite's disdain for Salman Khan is revealing. Maybe because he is a SoBo outsider? #TweetLikeABhakt #SalmanVerdict
— Saptarshi Basu (@sabeaux) July 25, 2016
Pokémons can hire Salman Khan's lawyer in case they are caught.
— Great Grand Bajirao (@bizzarebhide) July 25, 2016
Salman Khan after Judge's statement.!#YoSalmanIsSoInnocent pic.twitter.com/sgcPuA5ruV
— Minion Basha (@vichupedia) July 25, 2016