ಮರಗಳನ್ನು ಕಡಿಯುವವರನ್ನು ಜೈಲಿಗೆ ಹಾಕಿ: ಸಾಲುಮರದ ತಿಮ್ಮಕ್ಕ
.jpg)
ಮಂಗಳೂರು,ಜು.25: ಮರಗಳನ್ನು ನೆಟ್ಟು ಬೆಳೆಸಿದರೆ ಅವುಗಳು ಫಲವನ್ನು ನೀಡುತ್ತವೆ. ಆದ್ದರಿಂದ ಮರಗಳನ್ನು ಕಡಿಯುವವರನ್ನು ಪೊಲೀಸರಿಗೆ ದೂರು ನೀಡಿಜೈಲಿಗೆ ಹಾಕಿ ಎಂದು 105ರ ಹರೆಯದ ಸಾಲುಮರದ ತಿಮ್ಮಕ್ಕ ಹೇಳಿದರು.
ನಗರದ ಸೈಂಟ್ ಆ್ಯಗ್ನೇಸ್ ಕಾಲೇಜನ ಸಭಾಂಗಣದಲ್ಲಿ ಸೋಮವಾರ ಆ್ಯಗ್ನೇಸ್ ಟುವಾರ್ಡ್ಸ್ ಕಮ್ಯುನಿಟಿ ಮತ್ತು ಇನ್ನರ್‌ವೀಲ್ ಕ್ಲಬ್ ಆ್ ಮಂಗಳೂರು ನಾರ್ತ್ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆ್ಯಗ್ನೇಸ್ ಕಾಲೇಜಿನ ಗೇಟು ಬಳಿಯ ಮುಖ್ಯ ರಸ್ತೆಯ ವಿಭಾಜಕ ಹಾಗೂ ಇತರ ಕಡೆ ವಿದ್ಯಾರ್ಥಿಗಳ ಜತೆ ಗಿಡಗಳನ್ನು ನೆಟ್ಟು ಅಲ್ಲಿಂದ ಸಭಾಂಗಣ ತನಕವೂ ನಡೆದುಕೊಂಡೇ ಬಂದ 105ರ ಹರೆಯದ ಸಾಲುಮರದ ತಿಮ್ಮಕ್ಕ ಅವರನ್ನು ಅರ್ಧದಿಂದ ಕಾರಿಗೆ ಹತ್ತಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಭಾರಿ ಕರತಾಡತನ ಮೂಲಕ ಸುತ್ತುವರಿದು ಅವರನ್ನು ಸ್ವಾಗತಿಸಿದರು.
ನಿಂತುಕೊಂಡೇ ಮಾತನಾಡಿದ ತಿಮ್ಮಕ್ಕ!
ವರ್ಷ 105 ಆದರೂ, ತಿಮ್ಮಕ್ಕನಲ್ಲಿನ ಜೀವನೋತ್ಸಾಹಕ್ಕೆ ಅವರು ಮಕ್ಕಳ ಜತೆ ನಿಂತುಕೊಂಡೇ ಮಾತನಾಡಲು ಆರಂಭಿಸಿದ ದೃಶ್ಯ ಸಾಕ್ಷಿಯಾಯಿತು. ತನ್ನ ಜೀವನ ಹಾಗೂ ಪರಿಶ್ರಮದ ಕುರಿತಂತೆ ಮಕ್ಕಳಿಗೆ ಅವರು ವಿವರಿಸಿದರು. ಸೈಂಟ್ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಎಂ.ಸುಪ್ರಿಯಾ ಅಧ್ಯಕ್ಷತೆ ವಹಿಸಿ, ಕಾಲೇಜಿನಲ್ಲಿ ಗಿ ನೆಟ್ಟು ಬೆಳೆಸಲು, ನೀರಿನ ಸದ್ಬಳಕೆ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳೂ ಇದನ್ನು ಅನುಸರಿಸಬೇಕು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಎಂ.ಜೆಸ್ವಿನಾ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಶಿಕ್ಷಕರ- ರಕ್ಷಕರ ಸಂಘದ ಉಪಾಧ್ಯಕ್ಷೆ ನೀನಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ದೇವಿಪ್ರಭಾ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿ ನಯನಾ ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ಕಾಲೇಜು ಆವರಣದ ಎದುರು ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಿದರು.
ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ನವೀನ್ ಡಿಸೋಜ, ಸೈಂಟ್ ಆಗ್ನೇಸ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಎಂ.ಸುಪ್ರಿಯಾ, ಜಂಟಿ ಕಾರ್ಯದರ್ಶಿ ಡಾ.ಮರಿಯಾ ರೂಪ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ನೀನಾ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಉದಯ ಕುಮಾರ್ ಬಿ., ಅರ್ಥಶಾಸ ವಿಭಾಗದ ಮುಖ್ಯಸ್ಥೆ ಡಾ.ಎಂ.ವೆನಿಸ್ಸಾ ಮತ್ತಿತರರು ಉಪಸ್ಥಿತರಿದ್ದರು.







