ಪುತ್ತೂರು: ಗಾಳಿ ಮಳೆಗೆ ಮನೆ ಕುಸಿತ

ಪುತ್ತೂರು, ಜು.25: ಗಾಳಿ ಮಳೆಗೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಬೇರಿಕೆ ಎಂಬಲ್ಲಿ ರವಿವಾರ ಮುಸ್ಸಂಜೆ ನಡೆದಿದ್ದು, ಘಟನೆಯಿಂದ ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ.
ಬೇರಿಕೆ ನಿವಾಸಿ ಕೂಲಿ ಕಾರ್ಮಿಕ ಪುತ್ತುಂಞಿ ಎಂಬವರ ಮನೆಯು ಕುಸಿದು ಬಿದ್ದಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ರವಿವಾರ ಸಂಜೆ ವೇಳೆಯ ಗಾಳಿಗೆ ಇದೇ ಪರಿಸರದಲ್ಲಿ ತೋಟದಲ್ಲಿನ ಅನೇಕ ಅಡಿಕೆ ಮರಗಳು ನೆಲಕ್ಕುರುಳಿವೆ.
ಘಟನಾ ಸ್ಥಳಕ್ಕೆ ಸ್ಥಳೀಯ ಗ್ರಾಮಕರಣಿಕರು, ಗ್ರಾಪಂ ಸದಸ್ಯರು ಭೇಟಿ ನೀಡಿದ್ದಾರೆ.
Next Story





