ದುಷ್ಕೃತ್ಯಕ್ಕೆ ಸಂಚು: ಓರ್ವನ ಬಂಧನ

ಮಂಗಳೂರು, ಜು. 25: ದುಷ್ಕೃತ್ಯವೆಸಗಲು ತಂಡದೊಂದಿಗೆ ಸಂಚು ರೂಪಿಸುತ್ತಿದ್ದ ಬೋಳೂರಿನ ರಾಜೇಶ್ ಯಾನೆ ಅಚ್ಚು (20)ನನ್ನು ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗರದ ಸುಲ್ತಾನ್‌ಬತ್ತೇರಿ ಬಳಿ ಬೋಳೂರಿನ ರಾಜೇಶ್ ಯಾನೆ ಅಚ್ಚು , ಮೋಕ್ಷಿತ್ (26) ಹಾಗೂ ಜಗದೀಶ್ ಯಾನೆ ಜಗ್ಗ (47) ಸೇರಿಕೊಂಡು ಸಂಚು ರೂಪಿಸುತ್ತಿದ್ದ ವೇಳೆ ಬರ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಮೋಕ್ಷಿತ್ ಹಾಗೂ ಜಗದೀಶ ಪರಾರಿಯಾಗಿದ್ದಾರೆ. ಮೋಕ್ಷಿತ್ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
Next Story





