Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಾರಿಗೆ ಬಸ್ ಸಿಬ್ಬಂದಿಯೇ ಬಸ್‌ಗಳಿಗೆ...

ಸಾರಿಗೆ ಬಸ್ ಸಿಬ್ಬಂದಿಯೇ ಬಸ್‌ಗಳಿಗೆ ಕಲ್ಲು ತೂರಿದರೇ?

ವಾರ್ತಾಭಾರತಿವಾರ್ತಾಭಾರತಿ25 July 2016 11:44 PM IST
share
ಸಾರಿಗೆ ಬಸ್ ಸಿಬ್ಬಂದಿಯೇ ಬಸ್‌ಗಳಿಗೆ ಕಲ್ಲು ತೂರಿದರೇ?

ಸರಕಾರಿ ಬಸ್‌ಗಳಿರುವುದು ಲಾಭ ಮಾಡುವುದಕ್ಕಾಗಿಯಲ್ಲ. ಅದು ಸೇವೆಯ ವ್ಯಾಪ್ತಿಯೊಳಗೆ ಬರುತ್ತದೆ. ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಇದು ವಹಿಸಿರುವ ಪಾತ್ರ ಬಹುದೊಡ್ಡದು. ಅದೆಷ್ಟೇ ದೌರ್ಬಲ್ಯಗಳಿದ್ದರೂ ಇಂದು ಬದುಕಿನಲ್ಲಿ ಈ ಸರಕಾರಿ ಬಸ್‌ಗಳನ್ನೇ ನೆಚ್ಚಿಕೊಂಡ ದೊಡ್ಡ ಸಂಖ್ಯೆಯ ತಳಸ್ತರದ ಜನರಿದ್ದಾರೆ. ರಾಜ್ಯದ ಸುಮಾರು ಒಂದೂವರೆಕೋಟಿ ಜನರು ಈ ಬಸ್‌ನ್ನು ಅವಲಂಬಿಸಿದ್ದಾರೆ. ಕೆಲವು ಪ್ರಮುಖ ನಗರಗಳು ಖಾಸಗಿ ಬಸ್‌ಗಳನ್ನು ನೆಚ್ಚಿಕೊಂಡಿವೆಯಾದರೂ ಗ್ರಾಮೀಣ ಪ್ರದೇಶಗಳು ಇಂದಿಗೂ ಸರಕಾರಿ ಬಸ್‌ಗಳನ್ನೇ ಅವಲಂಬಿಸಿವೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಹೊರತು ಪಡಿಸಿದಂತೆ ಉಳಿದ ಸಾರಿಗೆ ನಿಗಮಗಳು ನಷ್ಟದಲ್ಲಿವೆಯಾದರೂ ಲಾಭವೇ ಇದರ ಗುರಿಯಲ್ಲ ಎನ್ನುವ ಕಾರಣಕ್ಕಾಗಿ ಸರಕಾರ ಈ ನಷ್ಟವನ್ನು ಹೆಗಲಿಗೇರಿಸಿಕೊಳ್ಳುವುದು ಅತ್ಯಗತ್ಯ.

ಈಗಾಗಲೇ ಈ ಕ್ಷೇತ್ರದ ಕಡೆಗೆ ಖಾಸಗಿಯವರ ಕಣ್ಣು ಬಿದ್ದಿದೆಯಾದರೂ ಕರ್ನಾಟಕದಲ್ಲಿ ಸರಕಾರಿ ಬಸ್‌ಗಳು ನೀಡುತ್ತಿರುವ ದಕ್ಷ ಸೇವೆ ಅದಕ್ಕೆ ಅವಕಾಶವನ್ನು ನೀಡಿಲ್ಲ. ಇಂದಿಗೂ ಜನರು ಸರಕಾರಿ ಬಸ್‌ಗಳ ಕುರಿತಂತೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಅದನ್ನು ಕುಟುಂಬದ ಸದಸ್ಯ ಎಂಬಂತೆ ಪ್ರೀತಿಸುತ್ತಿದ್ದಾರೆ. ಅಂತಹ ಬಸ್‌ಗಳು ಇದೀಗ ತನ್ನನ್ನು ಪ್ರೀತಿಸುವ ಜನರ ಮೇಲೆಯೇ ಹರಿಯುವುದಕ್ಕೆ ಹೊರಟಿದೆ. ಸಾರಿಗೆ ಬಸ್‌ನ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಮಂಡಿಸಿ ಮುಷ್ಕರಕ್ಕಿಳಿದಿದ್ದಾರೆ. ಇದರಿಂದಾಗಿ ಸುಮಾರು 23 ಸಾವಿರಕ್ಕೂ ಅಧಿಕ ಬಸ್‌ಗಳು ಸ್ಥಗಿತಗೊಂಡಿವೆ. ಈ ಮುಷ್ಕರ ಅನಿರ್ದಿಷ್ಟಾವಧಿ ಕಾಲ ನಡೆಯುತ್ತದೆ ಎಂಬ ಬೆದರಿಕೆಯನ್ನೂ ಕಾರ್ಮಿಕ ಸಂಘಟನೆಗಳು ಒಡ್ಡಿವೆ.

ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಮುಂದಿಟ್ಟಿರುವ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಸರಕಾರ ಇದೆ. ಆದುದರಿಂದ ಮಾತುಕತೆ ಆರಂಭದಲ್ಲೇ ವಿಫಲವಾಗಿದೆ.ಪರಿಸ್ಥಿತಿ ಹೀಗೇ ಮುಂದುವರಿದರೆ, ಇದು ಒಟ್ಟು ವ್ಯವಸ್ಥೆಯನ್ನು ಎಲ್ಲಿಗೆ ಕೊಂಡೊಯ್ಯಬಹುದು ಎನ್ನುವುದನ್ನು ಊಹಿಸುವುದು ಕಷ್ಟ. ಸಿಬ್ಬಂದಿಯ ಬೇಡಿಕೆಗಳಲ್ಲಿ ಅತೀ ಪ್ರಧಾನವಾದುದು ವೇತನ. ಏಕಾಏಕಿ ಶೇ. 35ರಷ್ಟು ವೇತನವನ್ನು ಹೆಚ್ಚಳ ಮಾಡಬೇಕು ಎಂದು ಅವರು ಒತ್ತಾಯಿಸುತ್ತಿರುವುದು ಸನ್ನಿವೇಶವನ್ನು ಜಟಿಲವಾಗಿಸಿದೆ. ಶೇ. 10ರಷ್ಟು ವೇತನವನ್ನು ಏರಿಸಿದರೂ ಸುಮಾರು ಒಂದೂವರೆ ಸಾವಿರ ಕೋಟಿ ರೂ. ಹೆಚ್ಚುವರಿಹೊರೆಯಾಗಲಿದೆ. ಹೀಗಿರುವಾಗ ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಯ ಸಿಬ್ಬಂದಿಗೆ ಶೇ. 35ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿಯುವುದು ದುರುದ್ದೇಶವನ್ನು ಹೊಂದಿದೆ. ಕಾರ್ಮಿಕರಿಗೆ ನ್ಯಾಯ ಸಿಗಬೇಕು, ಅರ್ಹವೇತನ ಸಿಗಬೇಕು ಎನ್ನುವುದು ನಿಜ. ಇದೇ ಸಂದರ್ಭದಲ್ಲಿ, ಸರಕಾರಿ ಬಸ್‌ಗಳು ಉದ್ಯಮಗಳಲ್ಲ. ಅವು ಸೇವಾ ಕ್ಷೇತ್ರಗಳಿಗೆ ಸಂಬಂಧ ಪಟ್ಟದ್ದು. ಲಾಭವಾದರೂ, ನಷ್ಟವಾದರೂ ಅದನ್ನು ನಡೆಸತಕ್ಕಂತಹ ಹೊಣೆಗಾರಿಕೆ ಸರಕಾರಕ್ಕೆ ಸೇರಿದೆ. ಶೇ. 35ರಷ್ಟು ವೇತನವನ್ನು ಹೆಚ್ಚಿಸಬೇಕಾದರೆ ಅದು ತನ್ನ ಲಾಭವನ್ನು ಹೆಚ್ಚಿಸಿ ತೋರಿಸಬೇಕಾಗಿತ್ತು. ಅಥವಾ ಸೋರಿಕೆಯಾಗುವ ಹಣವನ್ನು ತಡೆದು ಅದು ಸರಕಾರದ ಬೊಕ್ಕಸಕ್ಕೆ ಸೇರುವಂತೆ ಮಾಡುವುದೂ ಈ ನಿಗಮಗಳ ಹೊಣೆಗಾರಿಕೆ. ಸರಕಾರ ಇವರ ಬೇಡಿಕೆಗಳನ್ನೆಲ್ಲ ಈಡೇರಿಸಬೇಕು ಎನ್ನುವ ಸಂದರ್ಭದಲ್ಲಿ, ಸಿಬ್ಬಂದಿಯ ಕಾರ್ಯವೈಖರಿಯಲ್ಲೂ ಬದಲಾವಣೆಗಳಾಗಬೇಕು ಎನ್ನುವುದು ಅಷ್ಟೇ ಸತ್ಯ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ಮತ್ತು ಸಾರಿಗೆ ಸಿಬ್ಬಂದಿಯ ಸಮನ್ವಯತೆಯಲ್ಲಿ ಸಮಸ್ಯೆ ಬಗೆ ಹರಿಯಬಹುದೇ ಹೊರತು, ಹಠದ ಧೋರಣೆಯಿಂದಲ್ಲ.

ತಾವು ಜನರಿಗೆ ಅನಿವಾರ್ಯ ಎನ್ನುವ ದುರಹಂಕಾರದಲ್ಲಿ ಸಾರಿಗೆ ಸಿಬ್ಬಂದಿ ತಮ್ಮ ಪಟ್ಟನ್ನು ಬಿಗಿಯಾಗಿ ಹಿಡಿದರೆ ಅವರು ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾರೆ ಎನ್ನುವುದನ್ನು ಮರೆಯಬಾರದು. ಇಂದು ಸಿಬ್ಬಂದಿ ಜನಸಾಮಾನ್ಯರನ್ನೇ ಒತ್ತೆಯಾಳುಗಳನ್ನಾಗಿಟ್ಟುಕೊಂಡು ಸರಕಾರವನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿರುವುದು ಸರಿಯಲ್ಲ. ತಮ್ಮ ಸಮಸ್ಯೆಗಳನ್ನು ಸರಕಾರಕ್ಕೆ ಸಿಬ್ಬಂದಿ ಮನವರಿಕೆ ಮಾಡಬೇಕು. ಹಾಗೆಯೇ ಜನರ ಬಳಿಗೆ ತಮ್ಮ ಬೇಡಿಕೆಗಳನ್ನು ಬೇರೆ ಬೇರೆ ರೂಪಗಳಲ್ಲಿ ತಲುಪಿಸಬೇಕು. ಅಂತಿಮವಾಗಿ ಅನಿವಾರ್ಯ ಎನ್ನುವ ಸ್ಥಿತಿಯಲ್ಲಷ್ಟೇ ಮುಷ್ಕರಕ್ಕೆ ಇಳಿಯಬೇಕು. ಇಂದು ಸರಕಾರಿ ಬಸ್ ಸಿಬ್ಬಂದಿ ತೆಗೆದುಕೊಂಡಿರುವ ನಿರ್ಧಾರ ಒಟ್ಟು ಸಾರಿಗೆ ಸೇವೆಯ ಮೇಲೆ, ಉದ್ಯಮಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಈ ಕ್ಷೇತ್ರವನ್ನು ಆಪೋಷನ ತೆಗೆದುಕೊಳ್ಳಲು ಹೊಂಚು ಹಾಕಿ ಕೂತಿರುವ ಖಾಸಗಿಯವರಿಗೆ ಈ ಮುಷ್ಕರ ಅನುಕೂಲ ಮಾಡಿಕೊಡಬಹುದು. ಹಾಗೆಯೇ ಈ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಇನ್ನಷ್ಟು ನಷ್ಟಗಳು ಸಿಬ್ಬಂದಿಗೆ ಒಳಿತನ್ನಂತೂ ಉಂಟು ಮಾಡಲಾರವು. ಸಾರಿಗೆ ಬಸ್‌ಗಳನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಿ, ತಮ್ಮ ಸೇವೆಗಳ ಮೂಲಕ ಖಾಸಗಿ ಬಸ್ ಪ್ರಯಾಣಿಕರನ್ನೂ ಆಕರ್ಷಿಸಿ ಅದನ್ನು ಲಾಭದೆಡೆಗೆ ಕೊಂಡೊಯ್ಯುವ ಹೊಣೆಗಾರಿಕೆ ಸಿಬ್ಬಂದಿಯದ್ದಾಗಿದೆ. ಹಾಗಾದಲ್ಲಿ ಅದು ಅವರ ಪಾಲಿಗೂ ಇನ್ನಷ್ಟು ಒಳಿತನ್ನು ಉಂಟು ಮಾಡಲಿದೆ. ಇದೇ ಸಂದರ್ಭದಲ್ಲಿ ಮುಷ್ಕರಕ್ಕೆ ಸಹಕರಿಸದ ಸರಕಾರಿ ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಸುಮಾರು 91 ಬಸ್‌ಗಳಿಗೆ ಹಾನಿಯಾಗಿವೆ. 15 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ. ಈ ನಷ್ಟವನ್ನು ಭರಿಸುವವರಾರು? ನಷ್ಟ ಅಧಿಕವಾದಷ್ಟೂ ಅದರ ಪರಿಣಾಮವನ್ನು ಮತ್ತೆ ಅನುಭವಿಸಬೇಕಾದವರು ಸಿಬ್ಬಂದಿ. ತಮಗೆ ಕೆಲಸಕೊಟ್ಟು ಪೊರೆದ ಬಸ್‌ಗಳಿಗೆ ಸಿಬ್ಬಂದಿಯೇ ಮುಷ್ಕರದ ಹೆಸರಿನಲ್ಲಿ ಕಲ್ಲುತೂರಾಟ ಮಾಡುವುದು, ಉಂಡ ತಟ್ಟೆಯನ್ನು ಕಾಲಲ್ಲಿ ಒದ್ದಂತೆ. ಆದುದರಿಂದ ಸಿಬ್ಬಂದಿ ನ್ಯಾಯ ಕೇಳುವ ಸಂದರ್ಭದಲ್ಲೂ, ತಮ್ಮ ಹಾದಿ ನ್ಯಾಯ ಸಮ್ಮತವಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

ಪ್ರತಿಭಟನೆಯ ಹೆಸರಿನಲ್ಲಿ ಬಸ್ ಸಿಬ್ಬಂದಿಯೇ ತಮ್ಮ ಬಸ್‌ಗಳಿಗೆ ಕಲ್ಲು ತೂರಿದರೆ ಉಳಿದವರಿಂದ ಇನ್ನೇನನ್ನು ನಾವು ನಿರೀಕ್ಷಿಸಬಹುದು? ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೆಯೇ ಪ್ರತಿಭಟನೆಗೆ ಕರೆಕೊಟ್ಟವರೇ ಈ ನಷ್ಟವನ್ನು ಭರಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಸರಕಾರ, ಸಿಬ್ಬಂದಿಯ ಬೇಡಿಕೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಈಡೇರಿಸಲು ಮುಂದಾಗ ಬೇಕಾಗಿದೆ. ಜನರನ್ನು ಈ ಮುಷ್ಕರದ ಸಂಕಟಗಳಿಂದ ಪಾರು ಮಾಡಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X