ದ್ವಿತೀಯ ಟೆಸ್ಟ್: ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಮ್ಯಾಂಚೆಸ್ಟರ್, ಜು.25: ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು 330 ರನ್‌ಗಳ ಅಂತರದಿಂದ ಜಯಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಸೋಮವಾರ 4ನೆ ದಿನದಾಟದಲ್ಲಿ ಗೆಲ್ಲಲು 565 ರನ್ ಗುರಿ ಪಡೆದಿದ್ದ ಪಾಕ್ ತಂಡ 70.3 ಓವರ್‌ಗಳಲ್ಲಿ 234 ರನ್ ಗಳಿಸಿ ಆಲೌಟ್ ಆಗಿದೆ. ಆರಂಭಿಕ ದಾಂಡಿಗ ಮುಹಮ್ಮದ್ ಹಫೀಝ್ (42) ಅಗ್ರ ಸ್ಕೋರರ್ ಎನಿಸಿಕೊಂಡರು.
ಇಂಗ್ಲೆಂಡ್‌ನ ಪರ ಆ್ಯಂಡರ್ಸನ್(3-41), ಅಲಿ(3-88) ಹಾಗೂ ವೋಕ್ಸ್(3-41) ತಲಾ ಮೂರು ವಿಕೆಟ್ ಪಡೆದಿದ್ದಾರೆ.
ಇದಕ್ಕೆ ಮೊದಲು 1 ವಿಕೆಟ್ ನಷ್ಟಕ್ಕೆ 98 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ 30 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಉತ್ತಮ ಬ್ಯಾಟಿಂಗ್ ಮುಂದುವರಿಸಿದ ರೂಟ್(ಔಟಾಗದೆ 71, 48 ಎಸೆತ, 10 ಬೌಂಡರಿ) ಹಾಗೂ ನಾಯಕ ಕುಕ್(ಔಟಾಗದೆ 76, 78 ಎಸೆತ, 9 ಬೌಂಡರಿ) 3ನೆ ವಿಕೆಟ್ ಜೊತೆಯಾಟದಲ್ಲಿ 105 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
Next Story





