ಕಳವು: ದೂರು ದಾಖಲು
ಮಂಗಳೂರು,ಜು.25: ನಗರದ ಪದವು ಎಂಬಲ್ಲಿರುವ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಕಚೇರಿಯಲ್ಲಿ ಶನಿವಾರ ರಾತ್ರಿಯಿಂದ ರವಿವಾರದ ಮಧ್ಯಾಹ್ನದ ನಡುವೆ ಸುಮಾರು 1,8700 ರೂ. ವೌಲ್ಯದ ವಸ್ತುಗಳ ಕಳ್ಳತನ ನಡೆದಿದೆ.
ಕಳ್ಳರು ಕಚೇರಿಗೆ ಹಾಕಿದ ಬೀಗವನ್ನು ಮುರಿದು ಕಪಾಟಿನಲ್ಲಿರಿಸಿದ್ದ 13 ಸಾವಿರ ರೂ., 1ಚೆಕ್ ಪುಸ್ತಕ, 4,500 ರೂ. ಅಂದಾಜು ಮೌಲ್ಯದ ಸಿಡಿ ಪ್ಲೇಯರ್, 1,200 ರೂ. ಬೆಲೆ ಬಾಳುವ ಸ್ಪೀಕರ್ ಆ್ಯಂಡ್ ವೂಫರ್ ಕಳವುಗೈದಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





