ಡೋಪಿಂಗ್ ಟೆಸ್ಟ್‌ನಲ್ಲಿ ಕುಸ್ತಿಪಟುಗಳು ಫೇಲ್ ಆಗುವುದು ದುರದೃಷ್ಟಕರ: ಸುಶೀಲ್ ಕುಮಾರ್
ಹೊಸದಿಲ್ಲಿ, ಜು.25: ರಿಯೋ ಒಲಿಂಪಿಕ್ಸ್‌ಗೆ ಮೊದಲು ಸಹ ಕುಸ್ತಿಪಟು ನರಸಿಂಗ್ ಯಾದವ್ ಸುತ್ತ ಡೋಪಿಂಗ್ ಹಗರಣ ಸುತ್ತುವರಿದಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಡೋಪಿಂಗ್ ಘಟನೆಯನ್ನು ಉಲ್ಲೇಖಿಸದೇ ಮಾತನಾಡಿದ ಸುಶೀಲ್,‘‘ ನಾನು ಭಾರತಕ್ಕೆ ಮೂರನೆ ಪದಕ ಗೆಲ್ಲಲು ಬಯಸಿದ್ದೆ. ಆದರೆ,ಕಳೆದ ಒಂದು ತಿಂಗಳಿಂದ ಒಲಿಂಪಿಕ್ಸ್ ತಯಾರಿಯಿಂದ ದೂರ ಉಳಿದಿದ್ದೆ. ಒಲಿಂಪಿಕ್ಸ್ ತಯಾರಿಯ ಬದಲಿಗೆ ದೇಶಕ್ಕೆ ಪದಕ ಗೆದ್ದುಕೊಡಲು ರಿಯೋಗೆ ತೆರಳಲಿರುವ ಸಹ ಕುಸ್ತಿಪಟುಗಳಿಗೆ ಬೆಂಬಲಿಸಲು ಬಯಸಿದ್ದೆ ಎಂದು ಹೇಳಿದರು.
Next Story





