ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾಲೇಜು ಪ್ರೊಫೆಸರ್ ಬಂಧನ
![ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾಲೇಜು ಪ್ರೊಫೆಸರ್ ಬಂಧನ ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾಲೇಜು ಪ್ರೊಫೆಸರ್ ಬಂಧನ](https://www.varthabharati.in/sites/default/files/images/articles/2016/07/26/rape-symbol_11.jpg)
ಕೋಝಿಕ್ಕೋಡ್,ಜುಲೈ 26: ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಲೇಜ್ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.ನಗರದ ಪ್ರಮುಖ ಕಾಲೇಜ್ನಲ್ಲಿ ಮಳೆಯಾಲಂ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ವಯನಾಡ್ ವೆಳ್ಳಮುಂಡದ ಡಾ. ಅಝೀರ್ ತರುವಣರ ವಿರುದ್ಧ ಮೂರನೆ ವರ್ಷದ ಪದವಿ ವಿದ್ಯಾರ್ಥಿನಿ ಶುಕ್ರವಾರ ಫರೋಕ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದಲಿತ ವಿಭಾಗಕ್ಕೆ ಸೇರಿದ ವಿದ್ಯಾರ್ಥಿನಿಯನ್ನು ಮದುವೆ ಆಗುವುದಾಗಿ ನಂಬಿಸಿ 2015ರ ಮಾರ್ಚ್ನಲ್ಲಿ ಪ್ರೊಫೆಸರ್ ತನ್ನ ಕ್ವಾರ್ಟ್ರಸ್ಗೆ ಕರೆಸಿಕೊಂಡು ವಿದ್ಯಾರ್ಥಿನಿಯನ್ನು ಲೈಂಗಿಕ ಶೋಷಣೆ ನಡೆಸಿದ್ದಾರೆಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿ ಪ್ರೊಫೆಸರ್ ಕೋರ್ಟಿಗೆ ಹಾಜರಾಗಿದ್ದು ಅವರಿಗೆ ಹದಿನಾಲ್ಕು ದಿವಸಗಳ ರಿಮಾಂಡ್ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story