ಗೋಮಾಂಸ ನಮ್ಮ ಆಹಾರ ಪದ್ಧತಿಯ ಭಾಗ: ಶಾಂತಿಪುರದ ದಲಿತರು

ಚಿಕ್ಕಮಗಳೂರು, ಜು.26: ‘‘ಅವರು ಹಿಂದೂಗಳಾಗಿದ್ದರೆ, ನಾವು ಯಾರು?’’ ಎಂಬ ಪ್ರಶ್ನೆಯನ್ನು ಶಾಂತಿಪುರದ ಯುವಕನೊಬ್ಬ ಎತ್ತಿದ್ದಾನೆ. ಜುಲೈ 10 ರಂದು ಹಲ್ಲೆಗೊಳಗಾದ ಐದು ಮಂದಿ ದಲಿತರ ಪೈಕಿ ಒಬ್ಬನಾಗಿರುವ ಬಲರಾಜ್ ಮನೆಯೆದುರು ಸೇರಿರುವ ಜನರ ಗುಂಪಿನಲ್ಲಿ ಆತ ಒಬ್ಬನಾಗಿದ್ದಾನೆ.
ಈ ದಲಿತ ಯುವಕರ ಮೇಲೆ ಸಂಘಪರಿವಾರಕ್ಕೆ ಸೇರಿದ ಸಂಘಟನೆಯೊಂದರ ಸದಸ್ಯರು ಗೋ ಕಳ್ಳತನ ಹಾಗೂ ಹತ್ಯೆ ಆರೋಪ ಹೊರಿಸಿ ಬರ್ಬರವಾಗಿ ಹಲ್ಲೆ ನಡೆಸಿದ್ದರು.
ಕುಂಡೂರಿನ ಹಿಂದೂ ಜನಜಾಗೃತಿ ವೇದಿಕೆಯ ಶಾಖೆಯ ಸ್ಥಾಪಕರಲ್ಲೊಬ್ಬರಾದ ದಲಿತ ಯುವಕ ಗುರುಮೂರ್ತಿ ಹೀಗೆ ಹೇಳುತ್ತಾರೆ ‘‘ನಾಲ್ಕು ವರ್ಷಗಳ ಹಿಂದೆ ನಮ್ಮ ಶಾಖೆಯ ಉದ್ಘಾಟನೆಯ ಸಲುವಾಗಿ ನಾವು ಸತ್ಯನಾರಾಯಣ ಪೂಜೆ ಆಯೋಜಿಸಿದ್ದೆವು. ಆದರೆ ನಮ್ಮ ಆಹಾರ ಪದ್ಧತಿಗೆ ನಮ್ಮ ನಾಯಕರು ವಿರೋಧ ವ್ಯಕ್ತಪಡಿಸಿದ್ದರಿಂದ ನಾವು ಸಂಘಟನೆಯನ್ನು ತೊರೆದೆವು.’’
ಗೋಮಾಂಸ ನಮ್ಮ ಆಹಾರ ಪದ್ಧತಿಯ ಭಾಗವಾಗಿದೆ. ಅದನ್ನು ಸೇವಿಸುವುದು ಅಕ್ರಮವಾದರೆ ಪೊಲೀಸರು ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ. ಬೇರೆಯವರು ನಮ್ಮ ಮೇಲೆ ಏಕೆ ಹಲ್ಲೆ ನಡೆಸಬೇಕು ? ಎಂದು ಹಲ್ಲೆಯಲ್ಲಿ ಗಾಯಗೊಂಡಿದ್ದ ಇನ್ನೊಬ್ಬ ಯುವಕ ಧನುಷ್ ಪ್ರಶ್ನಿಸುತ್ತಾರೆ.
ಶಾಂತಿಪುರ ಗ್ರಾಮದ ದಲಿತರು ಪುರಾತನ ಕಾಲದಿಂದಲೂ ಗೋಮಾಂಸ ಸೇವಿಸುವವರಾಗಿದ್ದಾರೆ. ಕೆ.ಜಿ.ಗೆ 400 ರೂಪಾಯಿಗೂ ಹೆಚ್ಚು ದರವಿರುವ ಕುರಿ ಮಾಂಸ ಖರೀದಿಸುವ ಸಾಮರ್ಥ್ಯ ನಮಗಿಲ್ಲ ಎನ್ನುತ್ತಾರೆ ಬಲರಾಜ ಅವರ ಪತ್ನಿ ಸರಸು.
courtesy : The Hindu







