3,500 ಮೀಟರ್ ಎತ್ತರದ ಪರ್ವತದ ತುತ್ತತುದಿಯಲ್ಲಿ ಕಾರು ನಿಲ್ಲಿಸಿದ ಭೂಪ!

ರಿಯಾದ್, ಜು.26: ಸುಮಾರು 3,500 ಮೀಟರ್ ಎತ್ತರದ ಫಿಫಾ ಪರ್ವತದ ತುತ್ತ ತುದಿಯಂಚಿನಲ್ಲಿ ಅಪಾಯಕಾರಿಯಾಗಿ ನಿಂತಿದ್ದ ಒಬ್ಬ ವ್ಯಕ್ತಿ ಹಾಗೂ ಆತನ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಭಾರೀ ಸುದ್ದಿ ಮಾಡಿತ್ತು.
ಸೌದಿ ಅರೇಬಿಯಾದ ಅಜೆಲ್ ದೈನಿಕ ಕೂಡ ಈ ಚಿತ್ರಗಳನ್ನು ಪ್ರಕಟಿಸಿತ್ತಲ್ಲದೆ, ಯುವಜನತೆಗೆ ಇಂತಹ ಅಪಾಯಕಾರಿ ಕೃತ್ಯಕ್ಕಿಳಿಯದಂತೆ ಎಚ್ಚರಿಕೆಯನ್ನೂ ನೀಡಿತ್ತು. ಸೌದಿ ಅರೇಬಿಯಾದಲ್ಲಿ ಇಂತಹ ಅಪಾಯಕಾರಿ ಸನ್ನಿವೇಶವನ್ನು ಪ್ರಕಟಿಸುವ ಚಿತ್ರವೊಂದು ವೈರಲ್ ಆಗಿದ್ದು ಇದೇ ಮೊದಲಲ್ಲ.
ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವವರನ್ನು ಒಂದೋ ಜೈಲಿಗೆ ಕಳುಹಿಸಬೇಕು ಇಲ್ಲವೇ ಅವರನ್ನು ಸೇನೆಗೆ ಸೇರಿಸಬೇಕು ಎಂದು ಸೌದಿ ನಾಗರಿಕರು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದರು.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸೌದಿಯ ಕೆಲ ಸಾಹಸಿಗರು ಅತಿ ವೇಗದಿಂದ ಎರಡು ಚಕ್ರಗಳಲ್ಲಿ ಚಲಿಸುತ್ತಿದ್ದ ಕಾರಿನೊಳಗೆ ಹಾರುವ ದೃಶ್ಯ ವೈರಲ್ ಆಗಿತ್ತೆನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Next Story







