ಕಾಸರಗೋಡು: ರಸ್ತೆ ಕಾಮಗಾರಿ ಬಗ್ಗೆ ತನಿಖೆಗೆ ಒತ್ತಾಯಿಸಿ ಧರಣಿ

ಕಾಸರಗೋಡು, ಜು.26: ಕಾಸರಗೋಡು ನಗರದ ರಸ್ತೆ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು, ಟ್ರಾಫಿಕ್ ಸಮಸ್ಯೆಗೆ ಬದಲಿ ವ್ಯವಸ್ಥೆ ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಸರಗೋಡು ಮೋಟಾರ್ ಕಾರ್ಮಿಕ ಸಂಘಟನೆ ಮತ್ತು ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಧರಣಿ ನಡೆಯಿತು.
ಬಳಿಕ ನಡೆದ ಸಮಾವೇಶವನ್ನು ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಎ.ಕೇಶವ ಉದ್ಘಾಟಿಸಿದರು. ಅಬೂಬಕರ್ ತುರ್ತಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಸಂಘಟನೆಗಳ ಮುಖಂಡರಾದ ಎ.ವಿಶ್ವನಾಥ, ಉಮ್ಮರ್, ಖಲೀಲ್, ಉಮೇಶ್ ಎಸ್.ಕೆ., ಹರೀಂದ್ರನ್, ಜುಬೈರ್, ಮನಮೋಹನ್, ಕೆ., ಆರ್. ಸುರೇಶ್, ಮಧು , ರಾಜನ್ ಪೆರಂಬಲ್, ಮಣಿಕಂಠನ್ ಮೊದಲಾದವರು ಮಾತನಾಡಿದರು.
Next Story





