ಮದರಸ ಪರೀಕ್ಷೆ: ಪುತ್ತೂರು ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಪುತ್ತೂರು, ಜು.26: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದ ವತಿಯಿಂದ ನಡೆದ 2015-16 ಸಾಲಿನ 10ನೆ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಪುತ್ತೂರು ರೇಂಜ್ ಮಟ್ಟದಲ್ಲಿ ಬನ್ನೂರು ಬುಸ್ತಾನುಲ್ ಉಲೂಂ ಮದ್ರಸದ ನಸ್ರೀನ ಪ್ರಥಮ ಹಾಗೂ ಆಯಿಶತುಲ್ ಕುಬ್ರಾ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
7ನೆ ತರಗತಿಯಲ್ಲಿ ಫಾರೂಕ್ ಪ್ರಥಮ, ಅನ್ವರ್ ದ್ವಿತೀಯ ಹಾಗೂ 5 ನೇ ತರಗತಿಯಲ್ಲಿ ಆಯಿಷ ಅಕ್ಕರೆ ಪ್ರಥಮ ಹಾಗೂ ತಂಝೀನ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಮದ್ರಸವು ಶೇ.100 ಫಲಿತಾಂಶ ಪಡೆದಿದೆ ಎಂದು ರೇಂಜ್ ಪ್ರತಿ ನಧಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಬಾಳಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





