ಪತ್ರಕರ್ತರ ಮೇಲೆ ದಾಳಿ 2014ರಲ್ಲಿ 114 ಪ್ರಕರಣ: ಆಹಿರ್
ಹೊಸದಿಲ್ಲಿ, ಜು.24: ದೇಶದ ವಿವಿಧ ಭಾಗಗಳಲ್ಲಿ 2014 ನೆಯ ಸಾಲಿನಲ್ಲಿ ಪತ್ರಕರ್ತರ ಮೇಲಿನ ಹಲ್ಲೆಗಳ ಒಟ್ಟು 114 ಪ್ರಕರಣಗಳು ದಾಖಲಾಗಿವೆಯೆಂದು ಲೋಕಸಭೆಗಿಂದು ಮಾಹಿತಿ ನೀಡಲಾಗಿದೆ.
ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಸಹಾಯಕ ಸಚಿವ ಹಂಸರಾಜ್ ಆಹಿರ್, ಲಭ್ಯ ಮಾಹಿತಿಯ ಪ್ರಕಾರ, 2014ರಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ(ಗಂಭೀರ ಗಾಯ) ಕಾನೂನಿನನ್ವಯ ಒಟ್ಟು 114 ಪ್ರಕರಣಗಳು ದಾಖಲಾಗಿವೆ ಹಾಗೂ 32 ಮಂದಿಯನ್ನು ಬಂಧಿಸಲಾಗಿದೆ ಎಂದರು.
ಪತ್ರಕರ್ತರ ಮೇಲಿನ ಈ ದಾಳಿಗಳಲ್ಲಿ ಉತ್ತರಪ್ರದೇಶದಲ್ಲಿ 63, ಬಿಹಾರದಲ್ಲಿ 22, ಮಧ್ಯಪ್ರದೇಶದಲ್ಲಿ 7 ಹಾಗೂ ಮಹಾರಾಷ್ಟ್ರದಲ್ಲಿ 5 ಪ್ರಕರಣಗಳು ನಡೆದಿದ್ದರೆ, ಉಳಿದವುಗಳು ಇತರ ರಾಜ್ಯಗಳಲ್ಲಾಗಿವೆಯೆಂದು ಆಹಿರ್ ತಿಳಿಸಿದರು.
Next Story