Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಣ್ಣೀರು ತರಿಸುವ ಕಂಧಮಾಲ್ ಧ್ವನಿಗಳು

ಕಣ್ಣೀರು ತರಿಸುವ ಕಂಧಮಾಲ್ ಧ್ವನಿಗಳು

ಬಿನು ಮ್ಯಾಥ್ಯೂಸ್ಬಿನು ಮ್ಯಾಥ್ಯೂಸ್26 July 2016 11:44 PM IST
share
ಕಣ್ಣೀರು ತರಿಸುವ ಕಂಧಮಾಲ್ ಧ್ವನಿಗಳು

ಕಂಧಮಾಲ್ ನನಗೆ ಹೊಸ ವಿಷಯವೇನೂ ಅಲ್ಲ.ಇಟ್ಠ್ಞಠಿಛ್ಟ್ಚ್ಠ್ಟ್ಟಿಛ್ಞಿಠಿ.ಟ್ಟಜ ವೆಬ್‌ಸೈಟ್ 2003ರ ನವೆಂಬರ್ 2ರಂದು ಅನಘ ಚಟರ್ಜಿಯವರ ‘ಒರಿಸ್ಸಾ: ಎ ಗುಜರಾತ್ ಇನ್ ದ ಮೇಕಿಂಗ್’ ಎಂಬ ಲೇಖನ ಪ್ರಕಟಿಸಿತ್ತು. ಇದು ಸ್ವತಂತ್ರ ಭಾರತದಲ್ಲಿ ಕ್ರೈಸ್ತ ಸಮುದಾಯದ ಮೇಲೆ ಭೀಕರ ಕೋಮು ದಾಳಿ ನಡೆಯುವ ಐದು ವರ್ಷ ಮೊದಲು. 2008ರಲ್ಲಿ ನಡೆದ ಈ ಘನಘೋರ ಕೋಮು ದಾಳಿಯಲ್ಲಿ 93 ಮಂದಿ ಬಲಿಯಾಗಿದ್ದರು. ಆದಿವಾಸಿ ಕ್ರಿಶ್ಚಿಯನ್ನರು ಹಾಗೂ ದಲಿತ ಕ್ರಿಶ್ಚಿಯನ್ನರಿಗೆ ಸೇರಿದ 350 ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳಿಗೆ ಹಾನಿ ಉಂಟಾಯಿತು. 6,500 ಮನೆಗಳು ಭಸ್ಮವಾದವು ಇಲ್ಲವೇ ಧ್ವಂಸವಾದವು. 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನಭಂಗ ನಡೆಯಿತು. ಹಲವು ಶೈಕ್ಷಣಿಕ, ಸಮಾಜಸೇವಾ ಮತ್ತು ಆರೋಗ್ಯ ಸಂಸ್ಥೆಗಳನ್ನು ನಾಶಪಡಿಸಿ, ಕೊಳ್ಳೆ ಹೊಡೆಯಲಾಯಿತು. ಸುಮಾರು 56 ಸಾವಿರ ಮಂದಿ ನಿರಾಶ್ರಿತರಾದರು.

ಈ ಭೀಕರ ಘಟನೆ ನಡೆದ ಬಳಿಕ ಇಟ್ಠ್ಞಠಿಛ್ಟ್ಚ್ಠ್ಟ್ಟಿಛ್ಞಿಠಿ.ಟ್ಟಜ 
ಮತ್ತೆ ಸತ್ಯಶೋಧನಾ ವರದಿ, ವಿಶ್ಲೇಷಣೆ, ಅಭಿಪ್ರಾಯ ಹಾಗೂ ವರದಿ ಸೇರಿದಂತೆ ಡಜನ್‌ಗಟ್ಟಲೆ ಲೇಖನಗಳನ್ನು ಪ್ರಕಟಿಸಿತು. ನಾನು 2015ರಲ್ಲಿ ಕಂಧಮಾಲ್‌ಗೆ ಭೇಟಿ ನೀಡಿ, ಅಲ್ಲಿನ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದೆ. ಕಂಧಮಾಲ್ ಸಂಘರ್ಷದಲ್ಲಿ ವಿಧವೆಯರಾದ ಹಲವು ಮಂದಿಯನ್ನು ಸಂದರ್ಶಿಸಿದೆ. ಅವರ ಜತೆ ಸಂವಾದ ನಡೆಸುವಾಗ, ಅವರ ಸಂಕಷ್ಟದ ಪರಿಸ್ಥಿತಿಗೆ ಒಂದಷ್ಟು ನೆರವು ನನ್ನಿಂದ ದೊರಕಬಹುದು ಎಂಬ ದೈನ್ಯದೃಷ್ಟಿ ಬೀರಿದರು. ಇಂದಿಗೂ ಇವರಲ್ಲಿ ಹಲವು ಮಂದಿ ಹಿಂದುತ್ವ ಶಕ್ತಿಗಳಿಂದ ದಬ್ಬಾಳಿಕೆ ಎದುರಿಸುತ್ತಿದ್ದಾರೆ. ತಮ್ಮ ಸ್ವಗ್ರಾಮಗಳಿಗೆ ಮರಳಲಾಗದ ಸ್ಥಿತಿಯಲ್ಲಿ ಇವರಿದ್ದಾರೆ. ಈ ಪೈಕಿ ಬಹುತೇಕ ಮಂದಿ ದೇಶದ ವಿವಿಧೆಡೆ ಮನೆಗೆಲಸ ಮಾಡಿಕೊಂಡು, ಟೈಲರ್‌ಗಳಾಗಿ ಕಷ್ಟಕರ ಬದುಕು ಸವೆಸುತ್ತಿದ್ದಾರೆ. ನಾಶವಾದ ತಮ್ಮ ಕುಟುಂಬದ ಸ್ಥಿತಿ ಸುಸ್ಥಿರಗೊಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ನನ್ನಂಥ ಲೆಕ್ಕಕ್ಕಿಲ್ಲದ ಪತ್ರಕರ್ತರಿಂದ ಅವರಿಗೆ ಯಾವ ಸಹಾಯವನ್ನೂ ಮಾಡಲಾರದು ಎನ್ನುವುದು ಬಹುತೇಕ ಅವರಿಗೆ ತಿಳಿಯದು. ಅವರ ಕಣ್ಣುಗಳಲ್ಲಿದ್ದ ನಿರೀಕ್ಷೆ ನಿಜವಾಗಿಯೂ ನನಗೆ ಆಘಾತ ತಂದಿತು. ಇಷ್ಟಾಗಿಯೂ ನಾನು ನನ್ನ ಕೆಲಸವನ್ನು ಸದ್ದಿಲ್ಲದೆ ಮಾಡಿ ಮುಗಿಸಿದೆ. ನಾಶವಾದ ಮನೆಗಳಿಗೆ ಭೇಟಿ ನೀಡಿದೆ; ವೃದ್ಧ ಮಹಿಳೆಯೊಬ್ಬರನ್ನು ಜೀವಂತವಾಗಿ ದಹಿಸಿದ ಮನೆಗೆ ಹೋದೆ. ಇಂದು ದನದ ಕೊಟ್ಟಿಗೆಯಾಗಿ ಪರಿವರ್ತನೆಗೊಂಡ ಚರ್ಚ್ ನೋಡಿದೆ; ಹಿಂಸಾಚಾರದ ಕೇಂದ್ರಬಿಂದು ಹಾಗೂ ಕಂಧಮಾಲ್ ಆರೆಸ್ಸೆಸ್ ಘಟಕದ ಹೃದಯಸ್ಥಾನವಾದ ರೈಕಿಯಾದಲ್ಲಿ ಸಾವಿರಾರು ಸಂತ್ರಸ್ತರ ಜತೆಗೆ ಹೆಜ್ಜೆ ಹಾಕಿದೆ. ಸರಕಾರದ ನಿರ್ಲಕ್ಷ್ಯ ಮತ್ತು ಕಠಿಣ ಪರಿಸ್ಥಿತಿಗಳ ಸವಾಲನ್ನು ಸಂಘಟಿತವಾಗಿ ಧೈರ್ಯದಿಂದ ಎದುರಿಸಿದ ಸಂತ್ರಸ್ತರನ್ನು ಭೇಟಿ ಮಾಡಿದೆ. ಇವರು ಎಲ್ಲರೂ ಸಂಘಟಿತರಾಗಿ ಕೋಮು ಸಾಮರಸ್ಯ ಎಂಬ ಸಂಘಟನೆ ಹುಟ್ಟುಹಾಕಿದ್ದಾರೆ. ಇಲ್ಲಿ ಜನ ಸಮುದಾಯದ ಜತೆ ಹೆಜ್ಜೆ ಹಾಕಿದಾಗ ನನಗೆ ಸ್ಪಷ್ಟವಾಗಿ ಅನಿಸಿದ್ದು, ಆರೆಸ್ಸೆಸ್/ಸಂಘ ಪರಿವಾರ ಶಕ್ತಿಗಳು 2008ರ ಕಂಧಮಾಲ್ ಘಟನೆಯನ್ನು ಮತ್ತೆಂದೂ ಮರುಕಳಿಸುವಂತೆ ಮಾಡಲಾರರು ಎನ್ನುವುದು.
ಇತ್ತೀಚೆಗೆ ನಾನು ಕೊಲ್ಕತ್ತಾದ ಕೇಶವ ಮೆನನ್ ಹಾಲ್‌ನಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕೂತು, ಕೆ.ಪಿ.ಶಶಿ ಅವರ ‘ವಾಯ್ಸಸ್ ಫ್ರಮ್ ದ ರುಯಿನ್ಸ್: ಕಂಧಮಾಲ್ ಇನ್ ಸರ್ಚ್ ಆಫ್ ಜೆಸ್ಟೀಸ್’ ಎಂಬ ಸಾಕ್ಷ್ಯಚಿತ್ರ ವೀಕ್ಷಿಸಿದೆ. ಶಶಿ ನನ್ನ ಒಳ್ಳೆಯ ಸ್ನೇಹಿತರಾಗಿರುವುದರಿಂದ ಅವರಿಂದಲೂ ಕಂಧಮಾಲ್‌ನ ಹಲವು ಕಥೆಗಳನ್ನು ನಾನು ಕೇಳಿದ್ದೆ. ಚಿತ್ರದ ರಭಸವನ್ನು ನಾನು ನೋಡಿದೆ. ಅದು ಇನ್ನೂ ಸ್ವಲ್ಪಮಟ್ಟಿಗಷ್ಟೇ ಸಂಪಾದನೆಯಾದ ಅವತರಣಿಕೆ.
ಈ ಚಿತ್ರವನ್ನು ನಿರ್ಮಿಸಲು ಅವರು ತೆಗೆದುಕೊಂಡ ನೋವು ಹಾಗೂ ಶ್ರಮವನ್ನೂ ನಾನು ಬಲ್ಲೆ. ಸಂಪೂರ್ಣ ಕತ್ತಲಲ್ಲಿ ಕೂತು, ಪರದೆಯಲ್ಲಿ ಹರಿದು ಬರುತ್ತಿದ್ದ ದೃಶ್ಯಾವಳಿಯನ್ನು ನೋಡಿದಾಗ, ಕಂಧಮಾಲ್ ಹಿಂಸಾಚಾರದ ಮರು ನೇರಪ್ರಸಾರ ನನ್ನ ಕಣ್ಣಮುಂದೆ ತೇಲಿ ಬರುವಂತೆ ಭಾಸವಾಯಿತು. ಹಿಂಸೆಯ ಕರಾಳ, ಬೀಭತ್ಸ ಕಥೆಗಳು, ಸಂತ್ರಸ್ತರ ಅಸಹಾಯಕತೆ, ತನ್ನ ಜೀವವನ್ನೇ ಪಣಕ್ಕಿಟ್ಟು ಹಲವು ಮಂದಿ ಕ್ರೈಸ್ತರ ಜೀವವನ್ನು ರಕ್ಷಿಸಿದ ಹಿಂದೂ ಯುವಕನ ಹೀರೊಯಿಸಂ, ನ್ಯಾಯ ಒದಗಿಸುವಲ್ಲಿ ಸರಕಾರ ಹಾಗೂ ನ್ಯಾಯವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಅಂತಿಮವಾಗಿ ಕೋಮುಶಕ್ತಿಗಳನ್ನು ಧಾರ್ಮಿಕ ಸಾಮರಸ್ಯದ ಮೂಲಕ ಸೋಲಿಸಿ ಚೇತೋಹಾರಿ ಭಾರತವನ್ನು ಪುನರ್ ನಿರ್ಮಾಣ ಮಾಡುವ ದೃಶ್ಯಾವಳಿಗಳು ನನ್ನನ್ನು ಭಾವಪರವಶವಾಗಿಸಿದವು. ಅಕ್ಷರಶಃ ನಾನು ಅಳುತ್ತಿದ್ದೆ.
ಈ ಚಿತ್ರ ವೀಕ್ಷಿಸಿದ ತಕ್ಷಣ ನನ್ನನ್ನು ವೇದಿಕೆಗೆ ಕರೆದು ಚಿತ್ರದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಕೇಳಿದರು. ವೇದಿಕೆಯಲ್ಲೇ ಹಲವು ಬಾರಿ ನಾನು ಉಕ್ಕಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಿದ್ದೆ. ಅಷ್ಟಾಗಿಯೂ ನಾನು ಕಣ್ಣೀರನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನಗೆ ಇಕ್ಕಟ್ಟಿನ ಸ್ಥಿತಿ. ಅಳುವಿನ ಮಧ್ಯೆಯೇ ನಾನು ಪ್ರೇಕ್ಷಕರಿಗೆ, ಕ್ರಾಂತಿಕಾರಿ ಕ್ರಿಯೆಗಳು ಹುಟ್ಟಿಕೊಳ್ಳುವುದೇ ಭಾವನೆಗಳಿಂದ. ಶಶಿ ಚಿತ್ರ, ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆದ ಘಟನೆಯ ಬಗ್ಗೆ ಇಂಥ ಭಾವನೆಗಳನ್ನು ಉದ್ದೀಪಿಸಿದೆ. ಇದೀಗ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದು ಹೇಳಿದೆ.
ಶಶಿ ಚಿತ್ರವನ್ನು ನೋಡುತ್ತಿದ್ದಾಗ ನನಗೆ ಭಾವನೆಗಳು ಕಟ್ಟೆಯೊಡೆದರೂ, ಇದು ಕೇವಲ ಅಳು ಭರಿಸುವ ದೃಶ್ಯಾವಳಿಯ ಸರಣಿಯಲ್ಲ. ಅದು ಕಂಧಮಾಲ್ ಘಟನೆಯ ಸೌಮ್ಯ ಹಾಗೂ ಸಮತೋಲಿತ ಅಧ್ಯಯನ. ಸಂಘ ಪರಿವಾರ/ ಆರೆಸ್ಸೆಸ್‌ನ ದ್ವೇಷ ಪ್ರಚಾರ, ಹೇಗೆ ಕಂಧಮಾಲ್ ನಾಡಿ ಮೂಲಕ ಪ್ರವಹಿಸಿತು ಎನ್ನುವುದನ್ನು ಕಟ್ಟಿಕೊಡುವ ಇತಿಹಾಸ. ಸ್ವಾಮಿ ಲಕ್ಷ್ಮಣಾನಂದರನ್ನು ಮಾವೋವಾದಿಗಳು ಹತ್ಯೆ ಮಾಡಿದ ಘಟನೆಯನ್ನು, ಕೋಮು ಶಕ್ತಿಗಳು, ಆದಿವಾಸಿ ಹಾಗೂ ದಲಿತ ಕ್ರೈಸ್ತರ ವಿರುದ್ಧದ ಸಿಟ್ಟಾಗಿ ತಿರುಗಿಸಿದರು ಎನ್ನುವುದನ್ನು ಬಣ್ಣಿಸುತ್ತದೆ. ಸ್ವಾಮಿ ಹತ್ಯೆಯಿಂದ ದಿಢೀರನೇ ಹುಟ್ಟಿಕೊಂಡ ಹಿಂಸಾಚಾರ ಇದಲ್ಲ. ಅಲ್ಪಸಂಖ್ಯಾತರ ಮೇಲಿನ ಪೂರ್ವಯೋಜಿತ ದಾಳಿ ಎನ್ನುವುದನ್ನು ಚಿತ್ರ ಬಿಂಬಿಸಿದೆ. ಬಳಿಕ ನ್ಯಾಯ ವಿತರಣೆ ವ್ಯವಸ್ಥೆಯನ್ನೂ ವಿಶ್ಲೇಷಿಸುವ ಈ ಚಿತ್ರ, ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅದು ಹೇಗೆ ವಿಫಲವಾಯಿತು ಎನ್ನುವುದನ್ನು ವಿಶ್ಲೇಷಿಸುತ್ತಾ ಹೋಗುತ್ತದೆ. ಸಂತ್ರಸ್ತರ ಪ್ರತಿರೋಧ ಚಳವಳಿ ಅಂತಿಮವಾಗಿ ಹೇಗೆ ಸಂತ್ರಸ್ತರ ನೆರವಿಗೆ ಬರುತ್ತದೆ ಎನ್ನುವುದನ್ನು ಬಣ್ಣಿಸುವ ಮೂಲಕ ಚಿತ್ರ ನಿರೀಕ್ಷೆಯೊಂದಿಗೆ ಕೊನೆಗೊಳ್ಳುತ್ತದೆ.
ಕಂಧಮಾಲ್ ಘಟನೆ ಬಗ್ಗೆ ಭಾವನೆಗಳು ಕಟ್ಟೆಯೊಡೆದದ್ದು ನನಗೆ ಮಾತ್ರ ಅಲ್ಲ. ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ 2015ರಲ್ಲಿ, ಫುಲಂಬಾನಿ ಜೈಲಿನಲ್ಲಿ ಕೊಳೆಯುತ್ತಿದ್ದ ಅಮಾಯಕ ದಲಿತ ಕ್ರೈಸ್ತರನ್ನು ಭೇಟಿ ಮಾಡಿ ಬಂದ ಬಳಿಕ ಕಣ್ಣೀರು ಒರೆಸಿಕೊಂಡಿದ್ದರು. ಸ್ವಾಮಿ ಲಕ್ಷ್ಮಣಾನಂದ ಹತ್ಯೆ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು. ಇಲ್ಲಿ ಗಮನಾರ್ಹ ಅಂಶವೆಂದರೆ, ಈ ಭೀಕರ ಕೋಮುಗಲಭೆ ಸಂಬಂಧ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವವರು ಇವರು ಮಾತ್ರ. ಖಂಡಿತವಾಗಿಯೂ ಭಾರತದ ನ್ಯಾಯ ವ್ಯವಸ್ಥೆ, ಕಂಧಮಾಲ್‌ನ ಆದಿವಾಸಿ/ ದಲಿತ ಕ್ರೈಸ್ತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಶಶಿ ಈ ಕಟುಸತ್ಯವನ್ನು ಬಹಳಷ್ಟು ಕಷ್ಟದಿಂದ ತಮ್ಮ ಚಿತ್ರದ ಮೂಲಕ ಬಹಿರಂಗಪಡಿಸಿದ್ದಾರೆ. ಬಹುಶಃ ಚಿತ್ರ ನೋಡಿದ ಬಳಿಕ ನಾನು ಅತ್ತದ್ದು ಈ ಕಾರಣಕ್ಕೆ.
ಕೃಪೆ: Countercurrents.org

share
ಬಿನು ಮ್ಯಾಥ್ಯೂಸ್
ಬಿನು ಮ್ಯಾಥ್ಯೂಸ್
Next Story
X