ಬೆಂಕಿ ತಗಲಿ ವೃದ್ಧೆ ಮೃತ್ಯು
ಕಡಬ, ಜು.26: ಹಳೆನೇರಂಕಿ ಕದ್ರ ನಿವಾಸಿ ಮಾನಕ್ಕ(73) ಎಂಬವರು ಜುಲೈ 7ರಂದು ಸ್ನಾನಗೃಹದಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಬೆಂಕಿ ತಗಲಿದ್ದು ಸುಟ್ಟ ಗಾಯಗಳಾಗಿತ್ತು.
ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Next Story





