ರಿಯೋ ಗೇಮ್ಸ್: ನರಸಿಂಗ್ ಬದಲಿಗೆ ರಾಣಾ

ಹೊಸದಿಲ್ಲಿ, ಜು.26: ನಾಡಾ ನಡೆಸಿದ್ದ ಡೋಪಿಂಗ್ ಟೆಸ್ಟ್‌ನಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅನುತ್ತೀರ್ಣಗೊಂಡ 2 ದಿನಗಳ ಬಳಿಕ ಭಾರತದ ಕುಸ್ತಿ ಒಕ್ಕೂಟ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ 74 ಕೆಜಿ ವಿಭಾಗದಲ್ಲಿ ಪ್ರವೀಣ್ ರಾಣಾರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ನರಸಿಂಗ್ ರಿಯೋ ಗೇಮ್ಸ್‌ನ 74 ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್‌ರನ್ನು ಹಿಂದಿಕ್ಕಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ರಾಣಾ 2014ರಲ್ಲಿ ಅಮೆರಿಕದಲ್ಲಿ ನಡೆದ ಡೇವ್ ಸ್ಮಾರಕ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.
2015ರಲ್ಲಿ ಇಟಲಿಯಲ್ಲಿ ನಡೆದಿದ್ದ ಕುಸ್ತಿ ಟೂರ್ನಿಯಲ್ಲಿ 70 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.
Next Story





