ಟರ್ಕಿಶ್ ಏರ್‌ಲೈನ್ಸ್‌ನ 211 ಉದ್ಯೋಗಿಗಳ ವಜಾ
ಇಸ್ತಾಂಬುಲ್, ಜು. 26: ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರು ಫತೇವುಲ್ಲಾ ಗುಲೇನ್‌ರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆನ್ನಲಾದ ಸಂಶಯದಲ್ಲಿ ಹಾಗೂ ‘‘ದೇಶದ ಹಿತಾಸಕ್ತಿಗೆ ವಿರುದ್ಧವಾದ ನಡವಳಿಕೆ’’ಯನ್ನು ಹೊಂದಿರುವುದಕ್ಕಾಗಿ ಟರ್ಕಿಶ್ ಏರ್‌ಲೈನ್ಸ್ ಸೋಮವಾರ ತನ್ನ 211 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಇತ್ತೀಚೆಗೆ ದೇಶದಲ್ಲಿ ನಡೆದ ವಿಫಲ ಸೇನಾ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
Next Story





