ಮಾಸ್ಕೊ ಭೇಟಿ ವೇಳೆ ಅವಘಡದಿಂದ ಪಾರಾಗಿತ್ತು ಮನಮೋಹನ್ ಸಿಂಗ್ ವಿಮಾನ
ತಡವಾಗಿ ಬಹಿರಂಗ
ಹೊಸದಿಲ್ಲಿ, ಜು.27: ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 2007ರ ನವೆಂಬರ್ 11ರಂದು ಮಾಸ್ಕೊಗೆ ಅಧಿಕೃತ ಭೇಟಿ ನೀಡಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನ, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ರಷ್ಯಾದ ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಇಳಿಯಬೇಕು ಎನ್ನುವಷ್ಟರಲ್ಲಿ, ವಿಮಾನದ ಲ್ಯಾಂಡಿಂಗ್ ಕೇರ್ ಕೆಳಕ್ಕೆ ಬರಲಿಲ್ಲ. ವಿಮಾನದ ಚಕ್ರ ಕೆಳಕ್ಕೆ ಬಂದಿಲ್ಲ ಎಂದು ಮಾಸ್ಕೊ ಎಟಿಸಿ ಸಿಬ್ಬಂದಿ ಕಾಕ್ಪಿಟ್ ನಲ್ಲಿ ಎಚ್ಚರಿಕೆ ದೀಪ ಆನ್ ಮಾಡಿದಾಗ 747 ಬೋಯಿಂಗ್ ಸಿಬ್ಬಂದಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.
ವಿಮಾನದ ಡಾಟಾ ರೆಕಾರ್ಡ್ ನಿಂದ ತಿಳಿದು ಬರುವಂತೆ, ಈ ವಿವಿಐಪಿ ವಿಮಾನವು, ಈ ತಾಂತ್ರಿಕ ದೋಷ ಸರಿಪಡಿಸುವವರೆಗೆ ಎಲೆಕ್ಟ್ರಿಕ್ ಗ್ಲೈಡ್ ಸ್ಲೋಪ್ ನಿಂದ ಕೆಳಗೆ ಹಾರುತ್ತಿತ್ತು. ಎಲೆಕ್ಟ್ರಿಕ್ ಗ್ಲೈಡ್ ಸ್ಲೋಪ್ ಎಂದರೆ, ಹಲವು ಪ್ರಯತ್ನಗಳ ಬಳಿಕವೂ ಕೆಳಕ್ಕೆ ಇಳಿಯುವ ವಿಮಾನವು ಸರಾಗವಾಗಿ ರನ್ವೇ ಮೇಲೆ ಇಳಿಯಲು ಸಾಧ್ಯವಾಗದಿದ್ದಾಗ ಅನುಸರಿಸುವ ವಿಮಾನಪಥವಾಗಿದೆ.
ವಿವಿಐಪಿ ವಿಮಾನದಲ್ಲಿ ಸುರಕ್ಷತಾ ವಿಧಾನವನ್ನು ಉಲ್ಲಂಘಿಸಲಾಗಿತ್ತೇ ಎಂಬ ಬಗ್ಗೆ ಹಲವು ಮಂದಿ ವಿಮಾನ ತಂತ್ರಜ್ಞರನ್ನು ಸಂಪರ್ಕಿಸಿದಾಗ ಹಿರಿಯ ಕಮಾಂಡರ್ ಒಬ್ಬರು ಹೇಳಿದಂತೆ, "ಈ ದೋಷ ಸರಿಪಡಿಸುವ ಮುನ್ನ ತೀರಾ ಕೆಳಗೆ ಇದು ಹಾರುತ್ತಿತ್ತು. ಇದೇ ವೇಳೆ ಮಾಸ್ಕೊ ಎಟಿಸಿ, ಕಾಕ್ಪಿಟ್ ನಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಿತ್ತು"