ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ
ಮೀನಾಡಿ ನಿವಾಸಿ ಮ್ಯಾಥ್ಯೂ ಮೃತಪಟ್ಟವರು
![ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ](https://www.varthabharati.in/sites/default/files/images/articles/2016/07/27/2 mathew.jpg)
ಕಡಬ, ಜು.27: ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮೀನಾಡಿ ಕೊಡೆಂಕಿರಿ ನಿವಾಸಿ ಮ್ಯಾಥ್ಯೂ(64) ಎಂಬವರು ಮೀನಾಡಿ ಸಮೀಪದ ಬೀರ್ಯ ಎಂಬಲ್ಲಿರುವ ತನ್ನದೇ ಜಮೀನಿನಲ್ಲಿ ಒಬ್ಬಂಟಿಯಾಗಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯುತ್ ಹೋಲ್ಡರನ್ನು ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು, ರಾತ್ರಿ ಸಮಯದಲ್ಲಿ ಬಲ್ಬ್ ಸಿಕ್ಕಿಸುವ ವೇಳೆ ತಂತಿ ತಗುಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
Next Story