ಬೆಳ್ತಂಗಡಿ: ಬಳೆಂಜ ನಿವಾಸಿ ವಾಸುದೇವ ಪೆರಾಜೆ (69) ನಿಧನ

ಬೆಳ್ತಂಗಡಿ,ಜು.27: ಭೂಸುಧಾರಣಾ ಚಳವಳಿಯಲ್ಲಿ ನೇತೃತ್ವ ವಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕಿನ ನಾಯಕರಾಗಿ ತಾಲೂಕಿನಲ್ಲಿ ಕಮ್ಯೂನಿಷ್ಟ್ ಪಕ್ಷದ ಬೆಳವಣಿಗೆಗೆ ಕಾರಣಕರ್ತರಲ್ಲಿ ಓರ್ವರಾದ ಬಳೆಂಜ ನಿವಾಸಿ ವಾಸುದೇವ ಪೆರಾಜೆ (69) ಅವರು ಮಂಗಳವಾರದಂದು ಅಲ್ಪಕಾಲದ ಅಸ್ವಖ್ಯದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಎರಡು ಬಾರಿ ಬಳೆಂಜ ಗ್ರಾಮ ಪಂಚಾಯತು ಸದಸ್ಯರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು. ಅಳದಂಗಡಿ ಸೇವಾ ಸಹಕಾರಿ ಸಂಘದ ಅದ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಕುಂಬಾರ ಸೇವಾ ಸಹಕಾರಿ ಸಂಘದ ಸ್ಥಾಪಕ ಅದ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿ ಸಂಘದ ಅಭಿವೃದ್ದಿಗಾಗಿ ದುಡಿದಿದ್ದಾರೆ. ಕಂಬಳಾಭಿಮಾನಿಯಾಗಿದ್ದ ಇವರು ಇದಕ್ಕೂ ಸಾಕಷ್ಟು ಬೆಂಬಲ ಪ್ರೋತ್ಸಾಹ ನೀಡಿದ್ದಾರೆ. ಇವರು ಪತ್ನಿ ಒಂದು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story





