ಜು.28 ರಂದು ಕಾಸರಗೋಡು ಜಿಲ್ಲಾ ಪಂಚಾಯತ್ ನ ಉದುಮ ಕ್ಷೇತ್ರದ ಉಪಚುನಾವಣೆ

ಕಾಸರಗೋಡು,ಜು.2: ಕುತೂಹಲ ಕೆರಳಿಸಿರುವ ಕಾಸರಗೋಡು ಜಿಲ್ಲಾ ಪಂಚಾಯತ್ ನ ಉದುಮ ಕ್ಷೇತ್ರದ ಉಪಚುನಾವಣೆ ನಾಳೆ ( 28) ನಡೆಯಲಿದೆ.
ಕಾಂಗ್ರೆಸ್ , ಐ ಎನ್ ಎಲ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಚುನಾವಣೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಮತ್ತು ಸಿಪಿಎಂ ನೇತೃತ್ವದ ಎಡರಂಗಕ್ಕೆ ನಿರ್ಣಾಯಕವಾಗಿದೆ. ಎಡರಂಗದಿಂದ ಐ ಎನ್ ಎಲ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದೆ.
ಕಾಂಗ್ರೆಸ್ ಸದಸ್ಯ ಪಾದೂರು ಕುಞಮು ಹಾಜಿ ಯವರ ನಿಧನದಿಂದ ಈ ಕ್ಷೇತ್ರ ತೆರವಾಗಿದ್ದು. ಆಡಳಿತಾರೂಢ ಐಕ್ಯರಂಗ ಮತ್ತು ಪ್ರತಿಪಕ್ಷವಾದ ಎಡರಂಗ ತಲಾ ಏಳು ಸ್ಥಾನ ಹೊಂದಿದೆ.
ಕಾಂಗ್ರೆಸ್ ನಿಂದ ಪಾದೂರು ಕುಞಮು ಹಾಜಿ ಯವರ ಪುತ್ರ ಪಿ .ಕೆ . ಎಂ ಶಾನ್ ವಾಜ್, ಐ ಎಂ ಎಲ್ ನಿಂದ ಮೊಯ್ದಿನ್ ಕು೦ಞ ಕಲ್ನಾಡ್ ಮತ್ತು ಬಿಜೆಪಿಯಿಂದ ಎನ್. ಬಾಬು ರಾಜು ಕಣದಲ್ಲಿದ್ದಾರೆ.
2015 ರ ನವಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಪಾದೂರು ಕುಞಮು ಹಾಜಿ 6437 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮತದಾನ ನಾಳೆ ಬೆಳಿಗ್ಗೆ 7 ರಿಂದ ಐದರ ತನಕ ನಡೆಯಲಿದೆ.
72 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದ್ದು, 51,935 ಮಂದಿ ಮತದಾರರಿದ್ದಾರೆ.
ಜುಲೈ 29 ರಂದು ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ನಡೆಯಲಿದ್ದು , ಹತ್ತು ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ.







