ಇದು ವಿಶ್ವದ ಅತಿ ಎತ್ತರದ ನಾಯಿ !

ಬ್ರಿಟನ್,ಜುಲೈ 27: ಚಿತ್ರದಲ್ಲಿ ಕಾಣುವ ತಮ್ಮ ಮಾಲಕರೊಂದಿಗೆ ಸೋಫಾದಲ್ಲಿ ಕುಳಿತ ನಾಯಿ ಜಗತ್ತಿನಲ್ಲಿ ಅತಿ ಎತ್ತರದ ನಾಯಿ ಎಂದು ಘೋಷಿಸಲ್ಪಡಲಿದೆ. ಮೇಜರ್ ಎಂಬ ಹೆಸರಿನ ಈ ನಾಯಿಗೆ ಮೂರು ವರ್ಷ, ಏಳು ಅಡಿ ಎತ್ತರವಿದೆ ಇದು ಜಗತ್ತಿನ ಅತಿದೊಡ್ಡ ನಾಯಿ ಎಂದು ವರದಿಯಾಗಿದೆ.
ಈ ನಾಯಿಯನ್ನು ನ್ಯೂಸೌತ್‌ವೇಲ್ಸ್‌ನಲ್ಲಿ ಬ್ರಯಾನ್ ಮತ್ತುಜೂಲಿ ವಿಲಿಯಮ್ಸ್ ಸಾಕುತ್ತಿದ್ದಾರೆ. ನಾಯಿಯಯನ್ನು ನೋಡಿದವರು ಹೆದರುವ ಆಕಾರ ಅದಕ್ಕಿದ್ದರೂ ಅದು ನಿರುಪದ್ರವಿ ಜೀವಿ ಎಂದು ಬ್ರಯಾನ್ ಹೇಳುತ್ತಾರೆ.ತನ್ನದೊಡ್ಡ ಆಕಾರದ ಕಾರಣದಿಂದ ಅದು ದಿನಾಲೂ ಹೆಚ್ಚು ಅಂದರೆ 22 ಗಂಟೆ ಹೊತ್ತು ನಿದ್ರಿಸುತ್ತದೆ. ನಾಯಿಗೆ ವಿಶೇಷ ಡಯಟಿಂಗ್ ಆಹಾರ ವಿದ್ದು ಚಿಕನ್ ಮತ್ತು ಅನ್ನ ನೀಡಲಾಗುತ್ತದೆ ಎಂದು ಬ್ರಯಾನ್ ಹಾಗೂ ಜೂಲಿ ಹೇಳುತ್ತಾರೆ.




Next Story







