ಬೆಳ್ತಂಗಡಿ: ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ,ಜು.27: ವೇಣೂರು ಠಾಣಾವ್ಯಾಪ್ತಿಯ ಬಜಿರೆ ನಿವಾಸಿ ಸತೀಶ್ (23) ಸೊಮವಾರ ಸಂಜೆಯ ವೇಳೆ ತನ್ನ ಮನೆಯ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಶೀನ ಎಂಬವರ ಪುತ್ರನಾಗಿದ್ದು ಅವಿವಾಹಿತನಾಗಿದ್ದ ಈತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದು ಬಂದಿಲ್ಲ ವೇಣೂರು ಪೋಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





