108 ಆ್ಯಂಬುಲೆನ್ಸ್ನಲ್ಲಿ ಜನ್ಮ ನೀಡಿದ ತಾಯಿ

ಸಾಂದರ್ಭಿಕ ಚಿತ್ರ
ಪುತ್ತೂರು,ಜು.27: ಪೆರ್ನೆ ಸಮೀಪ ಬುಧವಾರ ಮುಂಜಾನೆ 108 ಆ್ಯಂಬುಲೆನ್ಸ್ನಲ್ಲೇ ಹೆರಿಗೆಯಾದ ಘಟನೆ ನಡೆದಿದೆ. ಬಾಕಿಲಗದ್ದೆ ಉದನೆ ನಿವಾಸಿ ಲೀಲಾವತಿ ಎಂಬವರಿಗೆ ಮುಂಜಾನೆ 5 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ಆ್ಯಂಬುಲೆನ್ಸ್ಗೆ ಕರೆ ಮಾಡಿ ಕರೆಸಲಾಗಿತ್ತು. ಕರೆಗೆ ಸ್ಪಂದಿಸಿದ 108 ಆ್ಯಂಬುಲೆನ್ಸ್ ಸಿಬ್ಬಂದಿ, ಲೀಲಾವತಿ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಆ್ಯಂಬುಲೆನ್ಸ್ನಲ್ಲೇ ಹೆರಿಗೆಯಾಗಿದೆ. ಇಎಂಟಿ ಕುಮಾರ್ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಾಯಿ- ಮಗುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು. 108 ಆ್ಯಂಬುಲೆನ್ಸ್ ಚಾಲಕ ಚಂದ್ರಕಾಂತ್ ಸಹಕರಿಸಿದರು.
Next Story





